Ad Widget

ಅಗಲಿದ ಕರಸೇವಕ ಗಂಗಾಧರ ಮಾವಿನಗೋಡ್ಲು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ



ರಾಷ್ಟೀಯ ಸ್ವಯಂ ಸೇವಾಸಂಘ ಎಲಿಮಲೆ ಶಾಖೆ, ವಿಶ್ವಹಿಂದು ಪರಿಷತ್ ಬಜರಂಗದಳ ಅಯ್ಯೋದ್ಯೆ ಶಾಖೆ ಎಲಿಮಲೆ ಮಿತ್ರ ಬಳಗ(ರಿ) ಎಲಿಮಲೆ ಇದರ ನೇತೃತ್ವದಲ್ಲಿ  ದಿ.ಗಂಗಾಧರ ಮಾವಿನಗೋಡ್ಲು ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಮಾ.೩೧ ಅದಿತ್ಯವಾರ ಸಂಜೆ ಗಂಟೆ ೬ಕ್ಕೆ ಜ್ಞಾನದೀಪ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮೃತರು ಅನೇಕ ವರ್ಷಗಳ ಕಾಲ ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಎಲಿಮಲೆ ಪರಿಸರದಲ್ಲಿ ಅನೇಕ ಕಾರ್ಯಕರ್ತರನ್ನು ಬೆಳಸಿದ ಕೀರ್ತಿ ಅವರಿಗಿದೆ. ಹತ್ತಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ವಸತಿಯನ್ನು ಒದಗಿಸಿ ಉಚಿತ ಸೇವೆಯನ್ನು ಮಾಡಿದ ಇವರು ಅನೇಕ ಸಂಘಸಂಸ್ಥೆಗಳ ಬೆಳವಣಿಗೆ ಕಾರಣಕರ್ತರು. ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ್ದಾರೆ.‌
ಇವರ ಶ್ರದ್ಧಾಂಜಲಿ ಸಭೆಗೆ ರಾಷ್ಟೀಯ ಸ್ವಯಂ ಸೇವಾ ಸಂಘ ಸುಳ್ಯ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು, ಬಿಜೆಪಿ ಹಿರಿಯ ಮುಖಂಡರಾದ ಎ.ವಿ ತೀರ್ಥರಾಮ, ಮಾಜಿ ಸಚಿವರಾದ ಎಸ್. ಅಂಗಾರ, ಹಿರಿಯ ಸ್ವಯಂ ಸೇವಕರಾದ, ಚಂದ್ರಶೇಖರ ನಡುಗಲ್ಲು, ರಾಷ್ಟೀಯ ಸ್ವಯಂ ಸೇವಾಕ ಸಂಘದ ಪುತ್ತೂರು ಜಿಲ್ಲಾ ಉದ್ಯೋಗಿ ಪ್ರಮುಕ್ ಹೇಮಚಂದ್ರ ಮೆರ್ಕಜೆ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಾ ಹಿಂದೂ ಪರಿಷತ್ ಅಯ್ಯೋದೆ ಶಾಖೆ ಎಲಿಮಲೆ, ಇದರ ಅಧ್ಯಕ್ಷರಾದ ಬೋಜಪ್ಪಗೌಡ , ರಾಧಕೃಷ್ಣ ಮಾವಿನಕಟ್ಟೆ ಬಜರಂಗದಳದ ಸಯೋಜಕ ಹರಿಪ್ರಸಾದ್ ಎಲಿಮಲೆ ಪ್ರಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ ಇದರ ನಿರ್ದೆಶಕರಾದ ಪ್ರವೀಣ್ ರಾವ್ ದೊಡ್ಡತೋಟ ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯಗುರುಗಳಾದ ಗಂಗಾಧರ ಬಾಳುಗೋಡು, ಮಿತ್ರಬಳಗದ ಅಧ್ಯಕ್ಷರಾದ ಉದಯ ಕುಮಾರ್ ಚಳ್ಳ, ಭಾರತೀಯ ಜನತಾ ಪಾರ್ಟಿಯ ಮಂಡಲ ಸಮಿತಿಯ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಎಸ್ಡಿಎಂಸಿ ಅಧ್ಯಕ್ಷರಾದ ಜಯಂತ್ ಹರ್ಲಡ್ಕ, ಮುಕುಂದ ಕೊಡುಪಾಲ, ಸವಿತಾ, ದಿನೇಶ್ ಕೇರ, ರಾಜಗೋಪಾಲ ಅಂಬೆಕಲ್ಲು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading