
ದಿಢೀರ್ ಆಗಿ ಅನಾರೋಗ್ಯ ಕಾಣಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಐವತ್ತೊಕ್ಲು ಗ್ರಾಮದ ಮೇಲ್ಪಾಡಿಯಿಂದ ವರದಿಯಾಗಿದೆ.
ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿದ್ದ ಚಂದ್ರಶೇಖರ ಮೇಲ್ಪಾಡಿ (35) ಮೃತಪಟ್ಟ ದುರ್ದೈವಿ. ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ಬೂತ್ ಅಧ್ಯಕ್ಷನಾಗಿ, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.31 ರಂದು ಮುಂಜಾನೆ ಹೊಟ್ಟೆನೋವು ಬಂದು ತೀವ್ರ ಅನಾರೋಗ್ಯಗೊಂಡ ಅವರನ್ನು ಕಾಣಿಯೂರಿನ ಆಸ್ಪತ್ರೆಗೆ ಕರೆತಂದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅಲ್ಲಿ ತಲುಪುವ ವೇಳೆ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ . ಮೃತರು ತಾಯಿ ಶ್ರೀಮತಿ ದೇವಕಿ,ಪತ್ನಿ ಶ್ರೀಮತಿ ಭವ್ಯ, ಸಹೋದರ ವಸಂತ, ಸಹೋದರಿ, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.