ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ “ಅದ್ವಿತೀಯ2ಏ24” ಕಾರ್ಯಕ್ರಮವನ್ನು ಮಾ.೨೭ರಂದು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಶೈಕ್ಷಣಿಕ ನಿದೇರ್ಶಕರಾದ ಪ್ರೊ. ಎಂ. ಬಾಲಚಂದ್ರ ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್.ಎಂ.ಎA ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿರುವ ಶ್ರೀಮತಿ. ರತ್ನಾವತಿ.ಡಿರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಫೆಸ್ಟ್ನ ಅಗತ್ಯತೆ ಬಗ್ಗೆ ಮಾತಾನಾಡಿದರು. ವೇದಿಕೆಯಲ್ಲಿ ಫಸ್ಟ್ ಸಂಚಾಲಕರುಗಳಾದ ಶ್ರೀ. ಶ್ರೀಧರ್ ವಿ, ಶ್ರೀಮತಿ. ಗೀತಾ ಶೆಣೈ, ಶ್ರೀಮತಿ. ದಿವ್ಯ.ಟಿ.ಎಸ್ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಕುಮಾರಿ. ಅಂಕಿತ ಸ್ವಾಗತಿಸಿ. ಹೃತಿಕ್ ವಂದಿಸಿದರು. ಕುಮಾರಿ. ಆಯಿಷತ್ ತೌಶಿರ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ. ಕೃತಿಕಾ ಮತ್ತು ರತ್ನಸಿಂಚನ ಪ್ರಾರ್ಥಿಸಿದರು.
ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ೧೧ ತಂಡಗಳು ಭಾಗವಹಿಸಿ ಹಣಕಾಸು, ಪೋಟೋಗ್ರಾಫಿ, ಉತ್ತಮ ನಿರ್ವಹಕ, ಉತ್ತಮ ಆಡಳಿತ ನಿರ್ವಹಣೆ, ಮಾರುಕಟ್ಟೆ ಮೊದಲಾದವುಗಳನ್ನು ತಮ್ಮ ಜೀವನದಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್. ಎಂ.ಎA ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ.ಕೆ.ಟಿ.ವಿಶ್ವನಾಥ,ಸಿಇಒ, ವೆಂಕಟ್ರಮಣ ಕ್ರೇಡಿಟ್ ಸೊಸೈಟಿ ಸುಳ್ಯ ಇವರು ಮಾತನಾಡಿ ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟಿದೆ ಇಲ್ಲಿ ಸಿಕ್ಕ ವಿಚಾರಗಳು ತಮ್ಮ ಜೀವನದಲ್ಲಿ ಪ್ರಯೋಜನವಾಗಬಹುದು ಎಂದರು. ವೇದಿಕೆಯಲ್ಲಿ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ. ರತ್ನಾವತಿ.ಡಿ ಫೆಸ್ಟ್ನ ಸಂಚಾಲಕರಾದ ಶ್ರೀ. ಶ್ರೀಧರ.ವಿ , ಶ್ರೀಮತಿ. ಗೀತಾ ಶೆಣೈ, ಶ್ರೀಮತಿ ದಿವ್ಯ ಟಿ.ಎಸ್ ಫೆಸ್ಟ್ನ ವಿದ್ಯಾರ್ಥಿ ಸಂಚಾಲಕರಾದ ಕುಮಾರಿ ಅಂಕಿತ ಹಾಗೂ ಹೃತಿಕ್ ಮತ್ತು ತರಗತಿ ಪ್ರತಿನಿಧಿಗಳಾದ ಜೊಸ್‌ಬಿನ್ ಬಾಬು ಹಾಗೂ ಪ್ರೇಕ್ಷಾ ಉಪಸ್ಥಿತರಿದ್ದರು.