
ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬ್ಬಲ್ ಕಟ್ಟೆಯ ಸಮೀಪ ಮಾ.4 ರಂದು ಮಹಿಳೆಯೋರ್ವರ ಚಿನ್ನದ ಸರ ಕಸಿದು ಕಳ್ಳರು ಪರಾಯಾಗಿದ್ದರು. ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದರು.
ಇದೀಗ ಪೊಲೀಸರು ಕಳ್ಳತನ ಮಾಡಿದ ಚಿತ್ರದುರ್ಗ ಹಾಗೂ ಬೇಲೂರು ಮೂಲದ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.