
ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಯುವ ಚೌಪಾಲ್ ಕಾರ್ಯಕ್ರಮವು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ಕೂರ್ನಡ್ಕ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಶ್ರೀಕಾಂತ್ ಮಾವಿನಕಟ್ಟೆ, ಜಿಲ್ಲಾ ಉಪಾಧ್ಯಕ್ಷರು, ಹಾಗೂ ಸುಳ್ಯ ಯುವಮೋರ್ಚಾ ಮಂಡಲ ಪ್ರಭಾರಿ ವರುಣ್ ರಾಜ್ ಅಂಬಟ್, ಜಿಲ್ಲಾ ಕಾರ್ಯದರ್ಶಿಗಳಾದ ವಿರೂಪಾಕ್ಷ ಭಟ್, ಶ್ರೀ ಕೃಷ್ಣ ಕಡಬ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮನುದೇವ್ ಪರಮಲೆ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಯುವಮೋರ್ಚಾದ ಪ್ರಮುಖರಾದ ಲತೀಶ್ ಗುಂಡ್ಯ, ನಾಗರಾಜ್ ಬಡ್ಡಡ್ಕ, ನಿಖಿಲ್ ಮಡ್ತಿಲ, ತಾರಾನಾಥ್ ಪೂದೆ, ಹಾಗೂ ಬಡ್ಡಡ್ಕ ಭಾಗದ ಯುವ ಕಾರ್ಯಕರ್ತರು ಭಾಗವಹಿಸಿದರು. ಕಾರ್ಯಕ್ರಮದ ಬಗ್ಗೆ ಸುಳ್ಯ ಮಂಡಲ ಅಧ್ಯಕ್ಷರು ಶ್ರೀಕಾಂತ್ ಮಾವಿನಕಟ್ಟೆ ಮಾಹಿತಿ ನೀಡಿದರು.