
ಸುಳ್ಯ ತಾ. ಬ್ರಾಹ್ಮಣ ಸಂಘದ ಮಹಾಸಭೆಯು ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ಮಾ .26 ರಂದು ಸಂಘದ ಅಧ್ಯಕ್ಷ ಪಾಲೆಪ್ಪಾಡಿ ಡಾ|ಬಾಲಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾರ್ಥಿ ನಿಲಯ ಹಾಗೂ ಸಭಾಭವನದ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆದು ಈ ಕುರಿತು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕೃಷ್ಣ ರಾವ್ ನಾವೂರು ವರದಿ, ಮತ್ತು ಕೋಶಾಧಿಕಾರಿ ಭಾಸ್ಕರ ರಾವ್ ಬಯಂಬು ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕಿರಿ ಸಲಹೆ ಸೂಚನೆ ನೀಡಿದರು. ಉಪಾಧ್ಯಕ್ಷರುಗಳಾದ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ,ಪದ್ಮನಾಭ ಭಟ್ ಕನಕಮಜಲು ವೇದಿಕೆಯಲ್ಲಿದ್ದರು.