
ಚುನಾವಣಾ ಸಂದರ್ಭದಲ್ಲಿ ರೈತರು ಕೋವಿ ಠೇವಣಾತಿ ಇಡುವುದನ್ನು ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಕೋವಿ ಪರವಾನಗಿದಾರ ರೈತರ ಹಕ್ಕೊತ್ತಾಯ ಸಭೆ ಮಾ.26ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಕೃಷಿಕ ಯಂ ವೆಂಕಪ್ಪ ಗೌಡ ಮಾತನಾಡಿ ಬೆಳೆ ರಕ್ಷಣೆಗೆಂದು ನೀಡಿರುವ ಕೋವಿಗಳನ್ನು ಚುನಾವಣಾ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಸಮಯ ಡಿಪಾಸಿಟ್ ಇಡುವುದರಿಂದ
ಕೃಷಿಕರಿಗೆ ಸಮಸ್ಯೆ ಆಗುತ್ತಿದೆ. ರಾತ್ರಿಯ ವೇಳೆಯಲ್ಲಿ ತೋಟಕ್ಕೆ ನೀರು ಹಾಹಿಸುವ ಸಮಯ ತಮ್ಮ ರಕ್ಷಣೆಗೆ ಕೋವಿ ಬೇಕಾಗಿದೆ. ಅಲ್ಲದೆ ಆನೆ, ಚಿರತೆ, ಕಡವೆ, ಕಾಡು ಹಂದಿ ಸೇರಿ ವಿವಿಧ ಕಾಡು ಪ್ರಾಣಿಗಳು ಕೃಷಿ ಹಾನಿ ಮಾಡುತ್ತವೆ. ಈ ಸಂದರ್ಭದಲ್ಲಿ ಶಬ್ದ ಮಾಡಿ ಕಾಡು ಪ್ರಾಣಿಗಳನ್ನು ಓಡಿಸಲು ಬಂದೂಕು ಅತೀ ಅಗತ್ಯವಾಗಿದೆ. ಅಲ್ಲದೆ ಕಾಡಂಚಿನ ಗಡಿ
ಗ್ರಾಮಗಳಲ್ಲಿ ನಕ್ಸಲ್‌ಗಳು ಭೇಟಿ ನೀಡಿರುವುದು ಕೂಡ ಜನರಲ್ಲಿ ಆತಂಕ ಉಂಟಾಗಿದೆ. ಇದರಿಂದ ಜನರಿಗೆ ಧೈರ್ಯಕ್ಕೆ ಬಂದೂಕು ಮನೆಯಲ್ಲಿ ಅನಿವಾರ್ಯವಾಗಿದೆ. ಆದುದರಿಂದ ತಾಲೂಕಿನ ಕೃಷಿಕರಿಗೆ ಕೋವಿ ಡಿಪಾಸಿಟ್ ಮಾಡುವುದರಿಂದ ವಿನಾಯಿತಿ ನೀಡಬೇಕು. ಅಪರಾಧ ಹಿನ್ನಲೆ ಇಲ್ಲದವರಿಗೆ ಕೋವಿ ಠೇವಣಾತಿ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರಾದ ಪಿ.ಎಸ್ ಗಂಗಾಧರ,ಎನ್.ಎಸ್.ದಾಮೋದರ ನಾರ್ಕೋಡು, ಕೆ.ಪಿ.ಜಗದೀಶ್, ಲೋಲಜಾಕ್ಷ ಭೂತಕಲ್ಲು, ವಿಶ್ವನಾಥ ರಾವ್, ಜಯರಾಮ ರೈ ಎಂ.ಡಿ.ವಿಜಯಕುಮಾರ್, ಹೇಮಂತ ಮಠ, ಭರತ್ ಕುಮಾರ್, ಅಶೋಕ್ ಚೂಂತಾರು, ದಿವಾಕರ ಪೈ ಮಜಿಗುಂಡಿ, ಪದ್ಮನಾಭ ಭಟ್ ಕನಕಮಜಲು, ಹರೀಶ್ ಮೂರ್ಜೆ, ರಾಮ್ ಕುಮಾರ್ ಹೆಬ್ಬಾರ್, ಸುರೇಶ್ ಭಟ್ ಕೊಜಂಬೆ, ಬಾಲಕೃಷ್ಣ ಕೊಡೆಂಕಿರಿ, ರಾಕೇಶ್ ಕುಂಠಿಕಾನ, ಬಾಲಗೋಪಾಲ ಸೇರ್ಕಜೆ, ಸುರೇಶ್ ಅಮೈಶಂಭಯ್ಯ ಪಾರೆ, ಉಮಾಶಂಕರ ತೊಡಿಕಾನ, ಬಿಟ್ಟಿ ಬಿ ನೆಡುನಿಲಂ, ಚಂದ್ರಶೇಖರ ಅಡ್ಪಂಗಾಯ, ಮಹೇಶ್ ಮೇರ್ಕಜೆ, ಮಾಧವ ಗೌಡ ಸುಳ್ಯಕ್ಕೋಡಿ, ಮತ್ತಿತರ ಪ್ರಮುಖರು, ರೈತರು ಉಪಸ್ಥಿತರಿದ್ದರು. ಕೋವಿ ಡೆಪಾಸಿಟ್ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.