ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಇವರು ಆನ್ಲೈನ್ ನಲ್ಲಿ ನಡೆಸಿದ 15ನೇ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024ರಲ್ಲಿ 12ವರ್ಷದ ಒಳಗಿನ ವಯೋಮಿತಿ ವಿಭಾಗದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರ ಇದರ ವಿದ್ಯಾರ್ಥಿಗಳಾದ ಹವಿಕ್ಷಾ ಎಸ್. ಆರ್ ಮತ್ತು ಜಿಶಾ. ಕೆ. ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದು, ಖುಷಿ ಕೊಪ್ಪತಡ್ಕ, ನಿಹಾನಿ ವಾಲ್ತಾಜೆ, ಶರಣ್ಯ ಹರಿಹರ ಭಾಗವಹಿಸಿದ್ದು, ಪ್ರೊಸ್ತಹಕ ಬಹುಮಾನ ಪಡೆದಿದ್ದು ಟ್ರಸ್ಟ್ ವತಿಯಿಂದ ಹಸ್ತಾಂತರ ಮಾಡಲಾಯಿತು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಯೋಗ ತರಬೇತಿ ನೀಡಿರುತ್ತಾರೆ, ಈ ಸಂದರ್ಭದಲ್ಲಿ ಟ್ರಸ್ಟ್ ಮುಖ್ಯ ಅತಿಥಿಯಾಗಿ.ಡಾ. ಗೌತಮ್ ಕಳಗಿ ಡಾ. ರಾಜೇಶ್ವರಿ, ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ,ಪ್ರಶಾಂತ್ ವಾಲ್ತಾಜೆ,ರೋಹಿತಾಶ್ವ ಹರಿಹರ,ವಿನಯ್ ಮಾಡಬಾಕಿಲು ,ಸಾವಿತ್ರಿ ಹರಿಹರ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು ಯೋಗ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದರು.
- Thursday
- December 5th, 2024