Ad Widget

ವೈದ್ಯರ ಗ್ರಾಮೀಣ ವೈದ್ಯಕೀಯ ಸೇವೆ ಶ್ರೇಷ್ಠವಾದದ್ದು –  ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

  ಸಮಾಜ ಸೇವೆಯೇ ಜನರ ಸೇವೆ ಎಂಬ ಉದಾತ ಮನೋಭಾವದಿಂದ ನಿಟ್ಟೆ ಜಸ್ಟಿಸ್ ಕೆ ಎಸ್ ಸದಾನಂದ ಹೆಗಡೆಯವರು ಬಹಳ ಹಿಂದೆ ಇಲ್ಲಿ ಗ್ರಾಮೀಣ ಬಡ ಜನರಿಗೆ ದೂರಕ್ಕೆ ಹೋಗೋ ಬದಲು ಹತ್ತಿರದಲ್ಲಿ ಎಲ್ಲಾ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಸದಾನಂದ ಆಸ್ಪತ್ರೆಯನ್ನು ಆರಂಭಿಸಿರುತ್ತಾರೆ. ಅಂದಿನ ಕಾಲದಲ್ಲಿ ವೈದ್ಯಕೀಯ ಖರ್ಚುವೆಚ್ಚಗಳು ರೋಗಿಗಳಿಗೆ ದುಬಾರಿಯಾಗುವುದನ್ನು ಮನಗಂಡ ಹೆಗಡೆಯವರು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಹಾಗೂ ಕೆಲ ಸಂದರ್ಭದಲ್ಲಿ ಉಚಿತವಾಗಿ ಸೇವೆಯನ್ನು ನೀಡುವುದರ ಮೂಲಕ ಸೇವಾ ತೃಪ್ತಿಯನ್ನ ಕಂಡುಕೊಂಡಿರುತ್ತಾರೆ. ಇಲ್ಲಿ ಪೂರ್ಣಕಾಲಿಕ ವೈದ್ಯರು, ದಂತ ವೈದ್ಯರು, ಹಾಗೂ ತರಬೇತಿ ವೈದ್ಯರುಗಳು ದಿನದ ಎಲ್ಲಾ ಸಂದರ್ಭಗಳಲ್ಲಿ ಸೇವೆಯನ್ನು ಒದಗಿಸುತ್ತಾ ಬಂದಿರುತ್ತಾರೆ. ಇಲ್ಲಿಯ ಸೇವೆಯನ್ನು ಫಲಾನು ಭವಿಗಳು ಉಪಯೋಗಿಸಿಕೊಳ್ಳಬೇಕೆಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ನುಡಿದರು.                                   

. . . . . . .

ಅವರು ರವಿವಾರ ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಯಲ್ಲಿ ಜಸ್ಟಿಸ್ ಕೆ ಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆ ದೇರ ಳಕಟ್ಟೆ,  ಸದಾನಂದ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಕೇಂದ್ರ ಸುಬ್ರಹ್ಮಣ್ಯ, ಮತ್ತು ರೋಟರಿ ಕ್ಲಬ್, ಲಯನ್ಸ್ ಕ್ಲಬ್ ,ಇನ್ನರ್ ವೇರ್ ಕ್ಲಬ್, ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ,ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  ಮುಖ್ಯ ಅತಿಥಿಗಳಾಗಿದ್ದ ನೆಟ್ಟೆ ಕೆ ಎಸ್ ಹೆಗಡೆ ಚಾರ್ಟಬಲ್ ಆಸ್ಪತ್ರೆ ಮುಖ್ಯಸ್ಥರಾದ ಸತೀಶ್ ಭಂಡಾರಿ ಅವರು ಮಾತನಾಡಿ ನಮ್ಮಲ್ಲಿ 23 ಗ್ರಾಮೀಣ ಆಸ್ಪತ್ರೆಗಳು ಇದ್ದು ಅದರಲ್ಲಿ ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಗೆ ನಾವು ಹೆಚ್ಚಿನ ಮಹತ್ವವನ್ನ ನೀಡುತ್ತಿದ್ದೇವೆ ಅಲ್ಲದೆ ಇಲ್ಲಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಹಂತ ಹಂತವಾಗಿ ನೀಡಿದ್ದೇವೆ. ಶ್ರೀ ಸುಬ್ರಹ್ಮಣ್ಯ ಮಠ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಇನ್ನಷ್ಟು ಈ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ವೇದಿಕೆಯಲ್ಲಿ ಸದಾನಂದ ಆಸ್ಪತ್ರೆ ಆಡಳಿತ ಅಧಿಕಾರಿ ಮೇಜರ್ ರಾಘವೇಂದ್ರ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ ,ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು, ಇನ್ನರ್ವೇಲ್ ಕ್ಲಬ್ ಪ್ರಭಾರ ಅಧ್ಯಕ್ಷ ಶ್ರುತಿ, ಡಾl ರವಿ ಕಕ್ಕೆ ಪದವು ,ನಿವೃತ್ತ ಪ್ರಾಂಶುಪಾಲ ಎಸ್ಎನ್ ಭಟ್, ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾl ಭಾನುಮತಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ಬಿನ ವಿಮಲಾ ರಂಗಯ್ಯ ಸ್ವಾಗತದೊಂದಿಗೆ ನಿರೂಪಣೆಗೆದರು . ಲಯನ್ ರಾಮಚಂದ್ರಪ್ಪಳಂಗಾಯ ಧನ್ಯವಾದ ಸಮರ್ಪಿಸಿದರು ಶಿಬಿರದಲ್ಲಿ ಕಣ್ಣಿನ ಪರೀಕ್ಷೆ , ಚರ್ಮ ರೋಗದ ಪರೀಕ್ಷೆಗಳು, ಕಣ್ಣು ಕಿವಿ ಮೂಗಿನ ಪರೀಕ್ಷೆಗಳು, ದಂತ ಪರೀಕ್ಷೆಗಳು, ಹಾಗೂ ಇನ್ನಿತರ ಪರೀಕ್ಷೆಗಳನ್ನ ನಿಟ್ಟೆ ಆಸ್ಪತ್ರೆಯ ವೈದ್ಯರ ತಂಡಗಳು  ನಡೆಸಿಕೊಟ್ಟರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!