
“ರಂಗಸ್ಥಳ”ಚಲನಚಿತ್ರ ಮುಹೂರ್ತ ಕಾರ್ಯಕ್ರಮವು ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಜರುಗಿತು. ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಇವರು ಪಂಚಲಿಂಗೇಶ್ವರ ದೇವರಿಗೆ ಮಂಗಳಾರತಿ ಮಾಡಿ ಪ್ರಾರ್ಥನೆ ಮಾಡಿ ಪ್ರಸಾದವನ್ನು ಕ್ಯಾಮರಾ ಗೆ ಹಾಕಿದರು. ಚಲನಚಿತ್ರ ದ ನಿರ್ಮಾಪಕರಾದ ರೇವಣ್ಣ ಮಂಡ್ಯ ರವರು ಮುಹೂರ್ತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಚಲನಚಿತ್ರದ ನಿರ್ಮಾಪಕರಾದ ರೇವಣ್ಣ ಮಂಡ್ಯ ರವರು ವಹಿಸಿದ್ದರು. ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಕಲ್ಮಡ್ಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಬೆಟ್ಟ ಉದಯಕುಮಾರ್, ಡಾ. ಸುಂದರ ಕೇನಾಜೆ, ಸುಬ್ರಾಯ ಭಟ್ ಓಣಿಯಡ್ಕ, ಪ್ರೀತಮ್ ರೈ ಬೆಳ್ಳಾರೆ, ಬೆಟ್ಟ ರಮೇಶ್ ಭಟ್, ಮಧುರಾಜ್ ಕುಂಬ್ರ, ಚಲನಚಿತ್ರದ ನಿರ್ದೇಶಕರಾದ ಈಶ್ವರ ನಿತಿನ್ ಭಾರದ್ವಾಜ್, ನಾಯಕ ನಟರಾದ ವಿಲೋಕ್ ರಾಜ್, ಛಾಯಾಗ್ರಾಹಕರಾದ ಇನೋಷ್ ಒಲಿವೇರ, ಕಾರ್ಯದರ್ಶಿ ಸಂತೋಷ್ ಯಾದವ್ , ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಬಳ್ಪ, ಸತ್ಯ ನಾರಾಯಣ ಭಟ್ ಕಾಯಂಬಾಡಿ, ಧರ್ಮಣ್ಣನಾಯ್ಕ್ ಗರಡಿ ಹಾಗೂ ಚಲನಚಿತ್ರ ತಂಡದ ಎಲ್ಲರೂ ಉಪಸ್ಥಿತರಿದ್ದರು ಸಭೆಯಲ್ಲಿ ಚಲನಚಿತ್ರದ ನಿರ್ಮಾಪಕರಾದ ರೇವಣ್ಣ ರವರನ್ನು ಚಲನಚಿತ್ರ ತಂಡದವರು ಹಾಗೂ ದೇಗುಲದ ವತಿಯಿಂದ ಸನ್ಮಾನಿಸಲಾಯಿತು. ಬೆಟ್ಟ ರಮೇಶ ರವರು ಎಲ್ಲರನ್ನು ಸ್ವಾಗತಿಸಿ, ನಾಯಕ ನಟರಾದ ವಿಲೋಕ್ ರಾಜರವರು ವಂದನಾರ್ಪಣೆಗೈದರು.
