Ad Widget

ವಿಶ್ವಮಹಿಳಾ ದಿನಾಚರಣೆ :ಉಚಿತ ಕ್ಯಾನ್ಸರ್ ತಪಾಸಣೆ

ಸುಳ್ಯ ಬಂಟರ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳೆಯರಿಗೆ ಯೇನೆಪಾಯ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಸ್ಥನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಪತ್ತೆ ಕಾರ್ಯಕ್ರಮ ಮಾ 20 ರಂದು ನಡೆಯಿತು.
ಕಾರ್ಯಕ್ರಮವನ್ನು ಪಕ್ಕಳ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಆರ್ ರೈ ವಹಿಸಿದ್ದರು.ಈ ಸಂದರ್ಭದಲ್ಲಿ ಗುಣವತಿ ಕೊಲ್ಲಂತಡ್ಕ, ಸವಿತಾ ಗಿರೀಶ್, ರೂಪಶ್ರೀ ಜೆ ರೈ, ನಿವ್ರತ್ತ ಶಿಕ್ಷಕಿ ಕಮಲಾಕ್ಷಿ ಶೆಟ್ಟಿ, ಶ್ರದ್ಧಾಎಲ್ ರೈ, ಉಷಾ ಬಿ ರೈ ಪಾಜೆಪಲ್ಲ ಹಾಗೂ ಯೇನೆಪಯ ಮಹಿಳಾ ಕ್ಲಿನಿಕ್ ನ ವೈದ್ಯಧಿಕಾರಿ, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ತಾಲ್ಲೂಕಿನ ಮಹಿಳಾ ಸಾಧಕರನ್ನು, ಸಂಘಟನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಮತ್ತಿತರ ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು. ವೇದಾ ಶೆಟ್ಟಿ ಸ್ವಾಗತಿಸಿ ಉಷಾ ಶೆಟ್ಟಿ ಮತ್ತು ಮೀರಾ ಎಂ ರೈ ಕಾರ್ಯಕ್ರಮ ನಿರೂಪಿಸಿದರು.

Related Posts

error: Content is protected !!