
ಕೊಲ್ಲಮೊಗ್ರ ರಬ್ಬರ್ ತೋಟದಲ್ಲಿ ಗೋ ಹತ್ಯೆ ನಡೆಸಿ,ವಿಡಿಯೋ ವೈರಲ್ ಮಾಡಿರುವ ಆರೋಪಿಗಳ ಮೇಲೆ ಕಠಿಣ ಕ್ರಮಗೊಳ್ಳುವಂತೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗೋವು ನಮಗೆ ಪೂಜನೀಯವಾದದ್ದು, ಭಗವಂತನನ್ನು ಅದರಲ್ಲಿ ಕಾಣುತ್ತಿದ್ದೇವೆ, ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಗೋ ಹತ್ಯೆ, ಆಕ್ರಮ ಸಾಗಾಟ ಹೆಚ್ಚುತ್ತಿರುವುದು ಸರ್ಕಾರದ ತುಷ್ಟಿಕರಣಕ್ಕೆ ಉದಾಹರಣೆ, ಕೊಲ್ಲಮೊಗ್ರ ಪರಿಸರದಲ್ಲಿ ಗೋ ಹತ್ಯೆ ನಡೆಸಿ ವಿಡಿಯೋ ಮಾಡಿ ಹಿಂದುಗಳ ನಂಬಿಕೆಯನ್ನು ಕೆಣಕುವ ಕೆಲಸ ಕೆಲ ಶಕ್ತಿಗಳಿಂದ ನಡೆಯುತ್ತಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ತಕ್ಷಣ ಆರೋಪಿಗಳನ್ನು ಬಂಧಿಸಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು,ಇಲ್ಲದಿದ್ದಾರೆ ಹಿಂದೂ ಸಮಾಜ ಒಟ್ಟಾಗಿ ಹೋರಾಟ ನಡೆಸಲಿದೆಯೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.