ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ ದ 2023- 24 ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ.ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇ&ಸಿ ವಿಭಾಗದ ಮುಖ್ಯಸ್ಥೆ ರಮಾದೇವಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ, ಇ&ಸಿ ಅಸೋಸಿಯೇಷನ್ ಸಲಹೆಗಾರ ಬಸನಗೌಡ ಪಾಟೀಲ್ , ಸಂಘದ ಅಧ್ಯಕ್ಷ ತೇಜಸ್ ಎಂ.ಆರ್, ಕಾರ್ಯದರ್ಶಿ ಲಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು . ತೇಜಸ್ ಎಂ.ಆರ್ ಸ್ವಾಗತಿಸಿ , ಕ್ರತಿಕಾ ಕೆ ವಂದಿಸಿದರು. ಕು. ರಕ್ಷಿತಾ ಡಿ.ಎ ಕಾರ್ಯಕ್ರಮ ನಿರೂಪಿಸಿದರು.
- Tuesday
- December 3rd, 2024