
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಿಳಾ ದಿನಾಚರಣೆ ಮತ್ತು ಆರೋಗ್ಯ ಮಾಹಿತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವೂ ಜೇಸಿ ಭವನದಲ್ಲಿ ನಡೆಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಸ್ಥಳೀಯವಾಗಿ ದೊರೆಯುವ ಸಸ್ಯಗಳ ಉಪಯೋಗ ಮತ್ತು ಮನೆಮದ್ದು ವಿಚಾರವಾಗಿ ಶಶ್ಮಿ ಭಟ್ ಅಜ್ಜಾವರ ಮಾಹಿತಿ ನೀಡಿದರು.
ಕರ್ನಾಟಕ ಅರೆಭಾಷ ಅಕಾಡೆಮಿ ಯ ಸದಸ್ಯರಾಗಿ ಆಯ್ಕೆಯಾದ ಜೇಸಿ ಲತಾ ಪ್ರಸಾದ್ ಕುದ್ಪಾಜೆ ಇವರಿಗೆ ಶಾಲು ಹೊದೆಸಿ ಮಾಲಾರ್ಪಣೆ ಮಾಡಿ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.
ಸಭಾಧ್ಯಕ್ಷತೆ ಯನ್ನು ಜೇಸಿ HGF ಗುರುಪ್ರಸಾದ್ ನಾಯಕ್ ವಹಿಸಿದ್ದರು. ನಿಕಟ ಪೂರ್ವಾಧ್ಯಕ್ಷ ನವೀನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು ಈ ಸಂದರ್ಭದಲ್ಲಿ ಜೆಸಿಐಯ ಗೋ ಗ್ರೀನ್ ಯೋಜನೆಯ ಪರವಾಗಿ ಹುಟ್ಟುಹಬ್ಬ ಆಚರಿಸಿದ ರಮ್ಯ ರಂಜಿತ್ , ಧರಿತ್ರಿ ಅಜ್ಜಾವರ, ಸ್ಮಿತಾ ಮಂಜುನಾಥ್, ಶಾರವಿ ಇವರಿಗೆ ಹೂವಿನ ಗಿಡವನ್ನು ನೀಡಿ ಶುಭಾಶಯ ಕೋರಲಾಯಿತು. ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರ್, ರಂಜಿತ್ ಕುಕ್ಕೆಟ್ಟಿ ಗುರುರಾಜ್ ಅಜ್ಜಾವರ, ಗೀತಾಂಜಲಿ ಅಜ್ಜಾವರ, ಶೋಭ ಅಶೋಕ್ ಚೂಂತಾರ್, ಮಂಜುನಾಥ್, ಅಂಕಿತ್, ಅಕ್ಷತ್ ಮತ್ತು ಸದಸ್ಯರು ಉಪಸ್ಥಿತರಿದ್ದರು.