ರಾಜ್ಯದಲ್ಲಿ ಕೋಮು ದ್ವೇಷವನ್ನು ಹರಡುವ ರೀತಿಯಲ್ಲಿ ಮತನಾಡುತ್ತಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯದ ಕೆಲ ಶಾಸಕರಿಗೆ ಟಿಕೇಟ್ ನಿರಾಕರಣೆ ಮೂಲಕ ಬಿಜೆಪಿಯು ಇಂದು ಒಂದು ಪಾಠ ಕಲಿತಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ವಕ್ತಾರರಾದ ಟಿ ಎಂ ಶಾಹೀದ್ ಹೇಳಿದರು .
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ದೇಶದಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಂದು ಒಡೆದು ಆಳುವ ನೀತಿಯನ್ನು ಅನಿಸರಿಸುತ್ತಿದ್ದ ಕಟೀಲ್ , ಪ್ರತಾಪ್ ಸಿಂಹ , ಸಿ ಟಿ ರವಿ , ಅನಂತ್ ಕುಮಾರ್ ಹೆಗ್ಡೆಯಂತವರಿಗೆ ಇದೀಗ ಟಿಕೇಟ್ ನಿರಾಕರಣೆ ಮಾಡಲಾಗಿದೆ ಇದು ಕಾಂಗ್ರೆಸ್ ಸರ್ವ ಧರ್ಮ ಜಾತಿಯನ್ನು ಒಂದೇ ಎಂದು ಸರಕಾರದ ಕೆಲಸ ಕಾರ್ಯಗಳು ಮಾಡುತ್ತಿದ್ದು ಜನ ಇದಕ್ಕೆ ಅಭೂತಪೂರ್ವ ಬೆಂಬಲ ನೀಡುವುದನ್ನು ಕಂಡು ಈ ರೀತಿಯ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು . ಅಲ್ಲದೇ ಚುನಾವಣಾ ಬಾಂಡ್ ಮೂಲಕ ಇದೀಗ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ ಅವರಿಗೆ ಗೋ ಮಾಂಸರಪ್ತುದಾರರು ಮತ್ತು ಬ್ಲೇಕ್ ಲೀಸ್ಟ್ ನಲ್ಲಿರುವ ಕಂಪನೊಗಳು ನೀಡಿದ ಹಣದ ಲೆಕ್ಕಗಳು ಇವುಗಳಲ್ಲಿ ಕಾಣುತ್ತಿದೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು.
ಈ ಭಾರಿ ಕರ್ನಾಟಕ ರಾಜ್ಯದಲ್ಲಿ 20 ಸೀಟುಗಳನ್ನು ಗೆಲ್ಲಲಿದ್ದೆವೆ ಅಲ್ಲದೇ ದಕ್ಷಿಣ ಕನ್ನಡದಲ್ಲಿ ಓರ್ವ ಸಮರ್ಥ ಮತ್ತು ಸಾಮಾನ್ಯ ಓರ್ವ ವ್ಯಕ್ತಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಲಾಗುವುದು ಎಂದು ಹೇಳಿದರು . ಕಾಂಗ್ರೆಸ್ ಸುಳ್ಯದಲ್ಲಿ ಒಗ್ಗಟ್ಟಿನ ಮೂಲಕ ಕೆಲಸ ವಿರ್ವಹಿಸುತ್ತಿದೆ ಎಂದರು . ಕೃಷ್ಣಪ್ಪರ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಅವರ ಬಗ್ಗೆ ರಾಜ್ಯ ನಾಯಕರು ಮತ್ತು ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ ನಾವು ಗ್ಯಾರಂಟಿ ಸಮಾಷೇದ ವೇದಿಕೆಯಲ್ಲಿ ಆದ ಘಟನೆ ಬಗ್ಗೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾದ ಸಿದ್ದಿಕ್ ಕೊಕ್ಕೊ , ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯರಾದ ರಂಜಿತ್ ರೈ ಮೇನಾಲ , ಅಲ್ಪಸಂಖ್ಯಾತ ಸಮಿತಿಯ ಪ್ರಮುಖರಾದ ಹನೀಫ್ ಬೀಜದಕಟ್ಟೆ ಉಪಸ್ಥಿತರಿದ್ದರು
- Thursday
- January 30th, 2025