
ಕೊಲ್ಲಮೊಗ್ರ ಭಾಗದಲ್ಲಿ ಗೋಹತ್ಯೆ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಾಜರೋಷವಾಗಿ ನಡೆಯುತ್ತಿರುವ ಗೋಹತ್ಯೆ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ.
ಇದೀಗ ನಕ್ಸಲರು ಬಂದಿರುವ ಸುದ್ದಿಯ ನಡುವೆ ಇನ್ನೊಂದು ಸಮಾಜಘಾತುಕ ಕೃತ್ಯ ವೈರಲ್ ಬೆನ್ನಲ್ಲೇ ಜನ ಆಕ್ರೋಶಗೊಂಡಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಇಂತಹ ಘಟನೆಗಳು ನಡೆದಿದ್ದು ಪೋಲೀಸರು ಶೀಘ್ರ ಕ್ರಮ ಕೈಗೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆ.