ಬೇಡಿಕೆ ಈಡೇರಿಲ್ಲವೆಂದು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಘಟನೆ ಕಳಂಜ ಗ್ರಾಮದಿಂದ ವರದಿಯಾಗಿದೆ.
ಕಳಂಜ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಪಂಜಿಗಾರು ಮಣಿಮಜಲು ಸಂಪರ್ಕ ಸೇತುವೆಗೆ ತಡೆಗೋಡೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿ ಗ್ರಾಮ ಪಂಚಾಯತ್ ಅಧಿಕೃತ ಭರವಸೆ ನೀಡಿತ್ತು. ಆದರೇ ಗಡುವು ಮುಗಿದರೂ ಕಾಮಗಾರಿ ಮಾಡದೇ ಇರುವುದರಿಂದ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ರಾಜಕಾರಣಿಗಳನ್ನು,ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಕಳಂಜ ಗ್ರಾ.ಪಂ. ವ್ಯಾಪ್ತಿಯ ಒಂದನೇ ವಾರ್ಡ್ ಪಂಜಿಗಾರ್ ಮಣಿಮಜಲು ಸಂಪರ್ಕ ರಸ್ತೆ ಹಾಗೂ ಪೂರಕ ದಾರಿದೀಪಗಳಿಲ್ಲದೆ ಗ್ರಾಮಸ್ಥರಾದ ನಾವು ಸಂಕಷ್ಟ ಅನುಭವಿಸುತ್ತಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೂ ಸಹಿತ ಕಳಂಜ ಗ್ರಾ.ಪಂ.ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ನಿಟ್ಟಿನಲ್ಲಿ ಒಂದನೇ ವಾರ್ಡ್ ಗಳ ಗ್ರಾಮಸ್ಥರಾದ ನಾವು ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದು, ಯಾವುದೇ ಕಾರಣಕ್ಕೆ ನಮ್ಮ ವಾರ್ಡಿನ ಸಮಸ್ಯೆ ಬಗೆಹರಿಸದ ಹೊರತು ಮತ ಯಾಚನೆಗೆ ನಮ್ಮ ವಾರ್ಡಿಗೆ ಬಾರದಂತೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಅಮರ ಸುದ್ದಿಗೆ ತಿಳಿಸಿದ್ದಾರೆ.