ಕೊಕ್ಕೊ ಕೃಷಿ ರೈತರಿಗೆ ಈ ಬಾರಿ ಬಂಪರ್ ಆಫರ್ ನೀಡಿದೆ. ಬೆಳೆ ಕಡಿಮೆಯಾಗಿದ್ದರೂ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.
ಈ ಹಿಂದೆ ಕೊಕ್ಕೊ ದರ ಗರಿಷ್ಠ ರೂ 75 ರವರೆಗೆ ಏರಿಕೆಯಾಗಿತ್ತು. ಅಡಿಕೆ ಕೃಷಿಕರಿಗೆ ಉಪಬೆಳೆಯಾಗಿ ಪ್ರತಿ ವಾರದ ಆದಾಯ ಮೂಲವಾಗಿದ್ದು ಇದೀಗ ರೂ 170 ರ ಗಡಿ ದಾಟಿದ್ದು ರೈರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೊಕ್ಕೋ ಬೀಜಕ್ಕೆ ಭಾರಿ ಬೇಡಿಕೆಯಿದ್ದು ಹೊರ ದೇಶಗಳಿಂದ ಆಮದು ಆಗುತ್ತಿಲ್ಲವಾದ್ದರಿಂದ ದರ ಏರಿಕೆ ಆಗಿದೆ. ಇನ್ನೂರರ ಗಡಿ ದಾಟು ಸಾಧ್ಯತೆಯಿದೆ ಕೊಕ್ಕೋ ವ್ಯಾಪಾರಸ್ಥರೋರ್ವರು ಅಮರ ಸುದ್ದಿಗೆ ತಿಳಿಸಿದ್ದಾರೆ.