
ಸುಳ್ಯದ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಘಟಿಕೋತ್ಸವ ಕಾರ್ಯಕ್ರಮವು ಮಾ.೧೬ ರಂದು ಸಂಜೆ ೪.೩೦ಕ್ಕೆ ನೆರವೇರಿತು.
ಮುಖ್ಯ ಅತಿಥಿಗಳಾಗಿ ಕೆ.ಎಸ್. ಹೆಗಡೆ ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್, ನಿಟ್ಟೆ ಇಲ್ಲಿಯ ಪ್ರೋಫೆಸರ್ ಡಾ. ಸುದೀರ್ ರಾಜ್ ಕೆ., ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್, ಪ್ರಾಂಶುಪಾಲರಾದ ದೇಚಮ್ಮ ಟಿ. ಮಾದಪ್ಪ, ಮತ್ತು ವಿದ್ಯಾರ್ಥಿ ನಾಯಕರಾದ ಊರ್ವಿಮಾನ್ಯ, ಸಂಚಯ್ ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿ ಪೋಷಕರಾದ ಮದು ಯತೀಶ್ ವಿದ್ಯಾರ್ಥಿಗಳನ್ನು ಹುರಿತುಂಬಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ಧನುಷ್ ರಾಮ್, ಸ್ತುತಿ ಭಟ್, ಅನಿಸಿಕೆಯನ್ನು ವ್ಯಕ್ತಪಡಿಸಿದರು, ಜೊತೆಗೆ ವಿದ್ಯಾರ್ಥಿಗಳಾದ ಕು. ಆಜ್ಞಾ ಬಿ. ರೈ, ಕು. ಮೇದಾ ನಾರಾಯಣ್ ಭಟ್, ಯಶ್ಮಿತ್ ಎಸ್ ಗೌಡ, ವಿಹಾ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.