ಆಲೆಟ್ಟಿ ಗ್ರಾಮದ ಕೋಲ್ಚಾರು -ಪೈಂಬೆಚ್ಚಾಲ್ ನೀಲಗಿರಿ ಅಡ್ಕ- ಅಜ್ಜಾವರ ಸಂಪರ್ಕ ರಸ್ತೆಯ ಕಾಮಗಾರಿಗೆ ಮಾಜಿ ಸಚಿವ ಎಸ್. ಅಂಗಾರ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಸರ್ಕಾರದಿಂದ
ರೂ. 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು ರಸ್ತೆಯ ಕಾಮಗಾರಿಗೆ ಮಾ.16 ರಂದು ಗುದ್ದಲಿಪೂಜೆಯು ನಡೆಯಿತು.
ಅಜ್ಜಾವರ ಗ್ರಾಮದ ಮುಳ್ಯ ದೊಡ್ಡೆರಿ ಸಂಪರ್ಕಿತ ರಸ್ತೆಗೆ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಮಂಜೂರುಗೊಡಿದ್ದು ಇದರ ಗುದ್ದಲಿಪೂಜೆಯನ್ನು ಬಸವನಪಾದೆ ಜಂಕ್ಷನ್ ನಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ನೆರವೇರಿಸಿ ಮತನಾಡುತ್ತಾ ಈ ರಸ್ತೆಗೆ ಹೆಚ್ಚುವರಿ ತಗಲುವ ವೆಚ್ಚವನ್ನು ಮುಂದೆ ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸುಬೋಧ್ ಶೆಟ್ಟಿ ಮೇನಾಲ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಚನಿಯ ಕಲ್ತಡ್ಕ, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ, ಪಂ.ಸದಸ್ಯರಾದ ದಿನೇಶ್ ಕಣಕ್ಕೂರು, ಶಂಕರಿ ಕೊಲ್ಲರಮೂಲೆ, ಗೀತಾ ಕೋಲ್ಚಾರು, ಧರ್ಮಪಾಲ ಕೊಯಿಂಗಾಜೆ, ಕುಸುಮಾವತಿ ಬಿಲ್ಲರಮಜಲು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಆನಂದರಾವ್ ಕಾಂತಮಂಗಲ , ಮಹೇಶ್ ರೈ ಮೇನಾಲ , ಪ್ರಶಾಂತ್ ಬಸವನಪಾದೆ ,ದೇವಿಪ್ರಸಾದ್ ಅತ್ಯಾಡಿ , ಹರ್ಪಿತ್ ದೊಡ್ಡೇರಿ , ಚಂದ್ರಶೇಖರ್ ದೊಡ್ಡೇರಿ , ಆಶೀತ್ ದೊಡ್ಡೇರಿ, ಸುದರ್ಶನ ಪಾತಿಕಲ್ಲು, ಪಂ.ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ತಾ.ಪಂ.ಮಾಜಿ ಸದಸ್ಯೆ ಪದ್ಮಾವತಿ ಕುಡೆಂಬಿ, ಸೀತಾರಾಮ ಗಟ್ಟಿಗಾರು, ವಿಶ್ವನಾಥ ಕೊಯಿಂಗಾಜೆ, ಪ್ರದೀಪ್ ಕೊಲ್ಲರಮೂಲೆ, ನಿಸಾರ್ ಪೈಂಬೆಚ್ಚಾಲು ಸೇರಿದಂತೆ ಮತ್ತಿತರರು ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.