ಗಾಂಧಿನಗರದ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿರುವ ಡೆಲ್ಮಾ ಕಾಂಪ್ಲೆಕ್ಸ್ ಎದುರು ಒಳಚರಂಡಿಯ ಹಾಸುಗಲ್ಲು ಜಾರಿ ಚರಂಡಿಯೊಳಗೆ ಬಿದ್ದು ಒಳಚರಂಡಿ ತೆರೆದುಕೊಂಡ ಸ್ಥಿತಿಯಲ್ಲಿದೆ. ಇಲ್ಲಿನ ಪರಿಸರವಾಸಿಗಳಿಗೆ ಹಾಗೂ ಓಡಾಡುವ ಜನರಿಗೆ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿಯುಂಟಾಗಿದೆ. ಇಲ್ಲಿ ನೊಣ, ಸೊಳ್ಳೆ, ನಾಯಿಗಳ ಕೇಂದ್ರವಾಗಿ ಮಾರ್ಪಟ್ಟಿದ್ದರಿಂದ ರೋಗಗಳು ಬರುವ ಸಾದ್ಯತೆ ಹೆಚ್ಚಾಗಿದೆ. 2 ವಾರಗಳಿಂದ ಒಳಚರಂಡಿಯ ಹಾಸುಗಲ್ಲು ಜಾರಿದ ಸ್ಥಿಯಲ್ಲಿದ್ದು ಈ ಸಮಸ್ಯೆಯನ್ನು ಸರಿಪಡಿಸಲು ಸಂಬಂಧ ಪಟ್ಟವರಲ್ಲಿ ಅಲ್ಲಿಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.
ಸುತ್ತಮುತ್ತಲ ಜನಗಳು ಮಾರಕವಾದ ರೋಗಬಾಧಿಸುವ ಭಯದೊಂದಿಗೆ ಜೀವನ ನಡೆಸುತ್ತಿದ್ದಾರೆ. ಜವಾಬ್ದಾರಿ ವಹಿಸಬೇಕಾದವರಾರೂ ಇಲ್ಲಿಯವರೆಗೆ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ,ತೀರಾ ಅವೈಜ್ಞಾನಿಕ ರೀತಿಯಲ್ಲಿ ಹಾಸುಗಲ್ಲನ್ನು ಅಳವಡಿಸಿರುವ ಕಾರಣ ಈ ಮೊದಲೇ ಹಲವು ಬಾರಿ ಇದೇ ಪರಿಸ್ಥಿತಿಯುಂಟಾಗಿತ್ತು. ಈ ಸಮಸ್ಯೆಯ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕಾದವರು ಶಾಶ್ವತ ಪರಿಹಾರವನ್ನು ನೀಡಿ ಗಬ್ಬು ವಾಸನೆ ಹಾಗೂ ಅನಾರೋಗ್ಯ ಬಾಧಿಸುವ ಸಂಭವದ ಭಯದಿಂದ ಮುಕ್ತಗೊಳಿಸಿಕೊಡಬೇಕಾಗಿ ಸಂತ್ರಸ್ತ ಪರಿಸರವಾಸಿಗಳು ಕೋರಿಕೊಂಡಿದ್ದಾರೆ.
- Thursday
- November 21st, 2024