ಅಜ್ಜಾವರ ಗ್ರಾಮದ ಮೇನಾಲ ಕಲ್ಲಗುಡ್ಡೆಯಲ್ಲಿರುವ ಸ್ಮಶಾನಕ್ಕೆ ಸಂಬಂಧಿಸಿದಂತೆ ಅಜ್ಜಾವರ ಪಂಚಾಯತ್ ಗ್ರಾಮ ಸಭೆಯಲ್ಲಿ ಭಾರಿ ಚರ್ಚೆ ಮತ್ತು ಸಂಘಟನೆಯ ಮುಖಂಡರು ಹಾಗೂ ಗ್ರಾಮ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು ಆ ಬಳಿಕ ಗ್ರಾಮ ಪಂಚಾಯತಿನ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರು ಸಂಘಟನೆಯವರಿಗೆ ಪತ್ರಕ್ಕೆ ಸಹಿ ಹಾಕಿ ಕೊಟ್ಟು ಸ್ಮಶಾನ ಉಳಿಸಿ ಕೊಡುವ ಭರವಸೆ ನೀಡಿದ್ದರು.
ಸಂಘಟನೆಯವರು ನಿನ್ನೆಯ ದಿನ ಸಮಾಜ ಕಲ್ಯಾಣ ಇಲಾಖೆಗೆ ದೂರು ಅರ್ಜಿ ಕೊಟ್ಟು ಮನವಿ ಸಲ್ಲಿಸಿದ್ದರು.ಇವತ್ತು ಸುಳ್ಯ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಉಮಾದೇವಿ ಜಿ.ಕೆ.ಮತ್ತು ಪ್ರವೀಣ್ ರವರು ಕಲ್ಲಗುಡ್ಡೆ ಸ್ಮಶಾನದ ಜಾಗಕ್ಕೆ ಬಂದು ಪರಿಶೀಲನೆ ಮಾಡಿ ದಂಡಾಧಿಕಾರಿಗಳ ಗಮನಕ್ಕೆ ತಂದು ಸ್ಮಶಾನ ಜಾಗ ಉಳಿಸಿ ಕೊಡುತ್ತೆವೆ ಎಂಬ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ ಸ್ಥಳಿಯ ನಿವಾಸಿಗಳಾದ ಗೋಪಾಲ ಕರಿಯಮೂಲೆ, ಹಾಗೂ ಕೃಷ್ಣಪ್ಪ ಪಿ.ಸಿ.ಪಲ್ಲತ್ತಡ್ಕ ರವರು ಉಪಸ್ಥಿತರಿದ್ದರು.