ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದಲ್ಲಿ ಪೂಜಾ ಕಾರ್ಯಕ್ರಮಗಳು ಮಾ.12 ಮತ್ತು13 ರಂದು ನಡೆಯಿತು.
ಮಾ.12 ರಂದು ರಾತ್ರಿ ವಾಸ್ತು ಪೂಜೆ ಹಾಗೂ ಮಾ13 ರಂದು ಗಣಹೋಮವು ಪುರೋಹಿತ ನಟರಾಜ ಶರ್ಮರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ, ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ನಿರ್ದೇಶಕರುಗಳಾದ ಭಾಸ್ಕರ್ ರಾವ್ ಯು.ವಿ, ಪಿ.ಎಸ್ ಗಂಗಾಧರ್, ಸುರೇಶ್ ಎಂ.ಎಚ್, ವಿಜಯಕುಮಾರ್ ಉಬರಡ್ಕ, ಹರಿಪ್ರಸಾದ್ ಪಾನತ್ತಿಲ, ಈಶ್ವರ ಆರ್ ಕಲ್ಚಾರ್, ಹರೀಶ್ ಎಂ.ಎಸ್, ಜಗದೀಶ್ ಕಕ್ಕೆಬೆಟ್ಟು, ಶ್ರೀಮತಿ ಶಾರದಾ ಡಿ.ಶೆಟ್ಟಿ, ಶ್ರೀಮತಿ ಲೀಲಾವತಿ ಬಳ್ಳಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಶ್ರೀಮತಿ ರಮ್ಯ, ಅಟೆಂಡರ್ ಗುರುವ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸುಮಾರು ಒಂದು ಕೋಟಿ ಅರವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ನೂತನ ಕಟ್ಟಡದ ಏ.06 ರಂದು ಲೋಕಾರ್ಪಣೆಗೊಳ್ಳಲಿದೆ.
- Tuesday
- December 3rd, 2024