Ad Widget

ಅಪ್ರಾಪ್ತೆಯ ಮೇಲೆ ಖಾಸಗಿ ಬಸ್ಸ್ ನಿರ್ವಾಹಕನಿಂದ ತಡರಾತ್ರಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ , ಯುವಕನ ಬಂಧನ.‌

ಸುಳ್ಯದ ಮಂಡೆಕೋಲಿನಲ್ಲಿ ತಡರಾತ್ರಿ ಯುವಕನೊಬ್ಬ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತು ದೂರು ದಾಖಲಾದ ಘಟನೆ ವರದಿಯಾಗಿದೆ.

. . . . .

ಮಾ13ರ ತಡರಾತ್ರಿ ಸುಮಾರು ಒಂದು ಗಂಟೆಯ ಆಸುಪಾಸಿನಲ್ಲಿ ಈ ಘಟನೆ ನಡೆದಿದೆ. ಯುವಕನು ಅಪ್ರಾಪ್ತೆ ಯುವತಿಯ ಮನೆಯೊಳಗೆ ಪ್ರವೇಶಿಸಿ ದೌರ್ಜನ್ಯ ಕೃತ್ಯ ಎಸಗಲು ಯತ್ನಿಸಿದಾಗ ಯುವತಿ ಬೊಬ್ಬೆ ಹೊಡೆದುದರಿಂದ ಮನೆಯವರೆಲ್ಲ ಎಚ್ಚರಿಕೆಯಾಗಿ ಯುವತಿಯ ಕೊಠಡಿಗೆ ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬಂಧನವಾದ ಯುವಕ ಮೂಲತಃ ಉಪ್ಪಿನಂಗಡಿ ಯವನಾಗಿದ್ದು ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದ್ದು ಈ ಘಟನೆಯ ಕುರಿತಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!