ಆಲೆಟ್ಟಿ ಗ್ರಾಮ ಪಂಚಾಯತಿನ ಶೇಕಡಾ 25% ರ ಅನುದಾನವು ಪರಿಸಿಷ್ಟ ಜಾತಿ ಮತ್ತು ಪರಿಸಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಡಿಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತಿನ 2 ನೇ ವಾರ್ಡಿನ ಪಂಚಾಯತ್ ಸದಸ್ಯರ ಶಿಫಾರಸ್ಸಿನ ಮೇರೆಗೆ 2ನೇ ವಾರ್ಡಿನ ಕುಡೆ೦ಬಿ ಪರಿಶಿಷ್ಟ ಪಂಗಡದ ನೀಲಮ್ಮ, ವಸಂತಿ, ಸುಮತಿ, ನೀಲಮ್ಮ, ಪದ್ಮಾವತಿ, ರಾಮಕೃಷ್ಣ, ಪುಷ್ಪಲತಾ ಎಂಬ 7 ಫಲಾನುಭವಿಗಳಿಗೆ ಆಲೆಟ್ಟಿ ಗ್ರಾಮ ಪಂಚಾಯತಿನಿಂದ 500 ಲೀಟರ್ ನೀರು ತುಂಬಿಸುವ ಸಿಂಟೆಕ್ಸ್ ಟ್ಯಾಂಕ್ ಮಂಜೂರುಗೊಳಿಸಿರುತ್ತಾರೆ. ಇದರ ವಿತರಣೆ ಕಾರ್ಯಕ್ರಮವನ್ನು ಇಂದು ಆಲೆಟ್ಟಿ ಗ್ರಾಮ ಪಂಚಾಯತಿನಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ್, ಉಪಾಧ್ಯಕ್ಷರಾದ ಕಮಲ, 2 ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯ0ಗಾಜೆ, ಕುಸುಮ ಬಿಲ್ಲಾರಮಜಲು, ಪಂಚಾಯತ್ ಅಭಿವದ್ಧಿ ಅಧಿಕಾರಿ ಸೃಜನ್, ಪಂಚಾಯತ್ ಸಿಬ್ಬಂದಿ ಸೀತಾರಾಮ, ನೇತ್ರಾವತಿ, ಸಿಸ್ಟರ್ ಯಶಸ್ವಿನಿ, ಆಶಾ ಕಾರ್ಯಕರ್ತೆ ಶಂಕರಿ, ಉಷಾಕಿರಣ, ಮೀನಾಕ್ಷಿ, ಹಾಗೂ ಫಲನುಭವಿಗಳು ಉಪಸ್ತಿತರಿದ್ದರು.
- Thursday
- November 21st, 2024