

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದಿರಾ ರೈ ವಹಿಸಿದ್ದರು. ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ದಂಪತಿಗಳು ದೀಪ ಬೆಳಗಿಸಿ ಭಾರತ ಮಾತೆ ಮತ್ತು ನಿವೇದಿತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಲೀಲಾವತಿ ನಿವೃತ್ತ ಮುಖ್ಯ ಶಿಕ್ಷಕಿ ಬೆಳ್ಳಾರೆ ಇವರು ಮಹಿಳೆ ಮತ್ತು ಸಮಾಜ ವಿಷಯವಾಗಿ ಮಾತನಾಡಿದರು. ಶ್ರೀಮತಿ ಡಾ. ಭವ್ಯ ಕೆವಿಜಿ ಮೆಡಿಕಲ್ ಸುಳ್ಯ ಇವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಂತರ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಜಯಂತಿ ಜನಾರ್ಧನ್ ವಂದೇ ಮಾತರಂ ಗೀತೆಯನ್ನು ಹಾಡಿದರು. ವೀಣಾ ಮೋಂಟಡ್ಕ ಸ್ವಾಗತಿಸಿ ರಾಜೀವಿ ಐವರ್ನಾಡ್ ಧನ್ಯವಾದ ತಿಳಿಸಿದರು. ಶಾರದಾ.ಡಿ .ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು