ಲಯನ್ಸ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ, ವಾಣಿ ವನಿತಾ ಸಮಾಜ, ಸಂಜೀವಿನಿ ಒಕ್ಕೂಟ ಸುಬ್ರಹ್ಮಣ್ಯ ಹಾಗೂ ಇತರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಮಾ.08 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಎಂ.ಜೆ.ಎಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಉಪನ್ಯಾಸಕಿ ರೇಖಾ ರಾಣಿ, ಸೋಮಶೇಖರ್ ಹಾಗೂ ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಕಲ್ಲಾಜೆ, ವಾಣಿ ವನಿತಾ ಸಮಾಜದ ಹೇಮಾವತಿ ಉಪಸ್ಥಿತರಿದ್ದರು.
ಲ| ಭಾರತಿ ದಿನೇಶ್ ಸ್ವಾಗತಿಸಿ ಲ| ಚಂದ್ರಶೇಖರ ಪಾನತ್ತಿಲ ವಂದಿಸಿದರು. ಲ| ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅನಾಥ ಮಕ್ಕಳನ್ನು ಸಾಕಿದ ದಂಪತಿಗಳನ್ನು ಸನ್ಮಾನಿಸಲಾಯಿತು. ಮಹಿಳೆಯರಿಗೆ ಲಕ್ಕಿಗೇಮ್ ಆಯೋಜಿಸಲಾಗಿತ್ತು.
- Thursday
- November 21st, 2024