ಸುಳ್ಯ ಶಾಂತಿನಗರ ಶ್ರೀ ಮುತ್ತಪ್ಪ -ತಿರುವಪ್ಪ ದೈವರಾಧನಾ ಸೇವಾ ಸಮಿತಿ ಮತ್ತು ಮುತ್ತಪ್ಪ-ತಿರುವಪ್ಪ ಉತ್ಸವ ಸಮಿತಿ ಹಾಗೂ ಮಹಿಳಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಮಾ.9 ಮತ್ತು 10 ರಂದು ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವವು ನಡೆಯಿತು.
ಮಾ.9 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ ಕುಣಿತ ಭಜನೆಯು ನಡೆಯಿತು.
ಬಳಿಕ ದೈವಸ್ಥಾನದಲ್ಲಿ ಪೈಂಗುತ್ತಿ ಹಾಗೂ ಮುತ್ತಪ್ಪ ದೈವದ ಮಲೆಯರ್ಕಲ್ ನಡೆದು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಂತರ ಮುತ್ತಪ್ಪ -ತಿರುವಪ್ಪ ದೈವರಾಧನಾ ಸೇವಾ ಸಮಿತಿ ಅಧ್ಯಕ್ಷ ಮಧುಸೂದನ್ ಪಿ.ಯಂ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರುಗಿತು ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಎಸ್.ಅಂಗಾರ ಭಾಗವಹಿಸಿದ್ದರು.
ರಾತ್ರಿ ಶ್ರೀ ಮುತ್ತಪ್ಪ ದೈವದ ನೇಮ ಬೆಳ್ಳಾಟಂ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು ಬಳಿಕ ಇಂದು ಮುಂಜಾನೆ ಮುತ್ತಪ್ಪ ತಿರುವಪ್ಪ ದೈವದ ನೇಮನಡೆದು ಮಲೆ ಹತ್ತಿಸುವ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು .