
ಚೈತ್ರ ಯುವತಿ ಮಂಡಲ (ರಿ)ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಪದ್ಮನಾಭ ರಾವ್, ನಿಲಯ ಕಲ್ತಡ್ಕದಲ್ಲಿ ನಡೆಯಿತು.ಸಭಾಧ್ಯಕ್ಷತೆಯನ್ನು ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ವಹಿಸಿದ್ದರು. ಶ್ರೀಮತಿ ವಿಶಾಲಾಕ್ಷಿ ಕಲ್ತಡ್ಕರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಭಾಷಣಗಾರರಾಗಿ ಮಹಿಳಾ ಸಾಹಿತಿ ಶ್ರೀಮತಿ ವಿಮಲಾರುಣ ಪಡ್ಡoಬೈಲ್ ರವರು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರಗಳು, ಸವಾಲುಗಳು, ಮಕ್ಕಳ ಸಂಸ್ಕಾರ ಬಗ್ಗೆ ವಿವರಿಸಿದರು.,

ಶಿಕ್ಷಣತಜ್ಞ ನಿವೃತ್ತ ಅಧ್ಯಾಪಕರಾದ ಶ್ರೀ ಲೋಕಯ್ಯ ಅತ್ಯಾಡಿ, ಯುವಜನಾ ಸoಯುಕ್ತ ಮಂಡಳಿ ಸುಳ್ಯ ನಿರ್ದೇಶಕರಾದ ಶ್ರೀಮತಿ ವಿನುತಾ ಪಾತಿಕಲ್ಲು,ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ, ಯುವತಿ ಮಂಡಲ ಕಾರ್ಯದರ್ಶಿ ಶ್ರೀಮತಿ ಮಾಲತಿಸೂರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಪ್ರಯುಕ್ತ ಮದುರಂಗಿ, ಹೂವು ಕಟ್ಟುವುದು, ಹೆಣ್ಣು ಮಕ್ಕಳ ಜಡೆ ನೇಯುವುದು,ನಾಲಗೆ ಸುರುಳಿ,ಅದೃಷ್ಟ ಪರೀಕ್ಷೆ,ಸೀರೆ ಉಡುವ ಮುಂತಾದ ಸ್ಪರ್ಧೆಗಳು ನಡೆದವು.ಯುವಕ ಯುವತಿ ಮಂಡಲದ ಪದಾಧಿಕಾರಿಗಳು, ಸದಸ್ಯರು, ಊರಿನವರು ಉಪಸ್ಥಿತರಿದ್ದರು.ಬಹುಮಾನ ಪ್ರಯೋಜಕರರಾಗಿ ನಾರಾಯಣ ಬಂಟ್ರಬೈಲ್,ಗಿರಿಧರ ನಾರಲು ಸಹಕರಿಸಿದರು.ಪ್ರಾರ್ಥನೆಯನ್ನು ಕು.ಚಾರ್ವಿ ಕು.ತ್ರಿಷಾ ನೆರವೇರಿಸಿದರು. ಕು.ಧರಿತ್ರಿ ಕಾರ್ಯಕ್ರಮ ನಿರೂಪಿಸಿ,ಶ್ರೀಮತಿ ಗೀತಾಂಜಲಿಗುರುರಾಜ್ ವಂದಿಸಿದರು.