
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ವಾಲ್ತಾಜೆಯ ಶಿರಾಡಿ ನದಿ ಬಳಿ ಹಾಗೂ ಬಲ್ಕಜೆ ಎಂಬಲ್ಲಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್‌ರವರ ರೂ. 7.50 ಲಕ್ಷ ಅನುದಾನದಿಂದ ನಿರ್ಮಿಸುವ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಗ್ರಾ.ಪಂ.ಸದಸ್ಯ ಭವಾನಿಶಂಕರ ಮುಂಡೋಡಿ, ಪ್ರಮುಖರಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಮುಳುಗಾಡು, ದಿವಾಕರ ಮುಂಡೋಡಿ, ಶ್ರೀಕಾಂತ್ ಮಾವಿನಕಟ್ಟೆ, ಕೃಷ್ಣಯ್ಯ ಮೂಲೆತೋಟ, ಕಾಳಿಕಾ ಪ್ರಸಾದ್ ಮುಂಡೋಡಿ, ಕಿಶೋರ್ ಕುಮಾರ್ ಅಂಬೆಕಲ್ಲು, ಬಾಲಕೃಷ್ಣ ಮಡಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
