
ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಅದ್ದೂರಿಯಾಗಿ ಆರಂಭಗೊಂಡಿದೆ. ವಿಷ್ಣುಮೂರ್ತಿ ದೈವದ ಭಂಡಾರ ಆಗಮನದ ಬಳಿಕ ಕೋರಚ್ಚನ್ ದೈವದ ವೆಳ್ಳಾಟಂ ನಡೆಯಿತು. ಬಳಿಕ ಕಂಡನಾರ್ಕೇಳನ್ ದೈವದ ವೆಳ್ಳಾಟಂ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಗಲ್, ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.