
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ನಿರ್ಮಾಣಗೊಂಡ ಸಮೃದ್ಧಿ ಸಮದಾಯ ಭವನ ಮಾ.7ರಂದು ಲೋಕಾರ್ಪಣೆಗೊಂಡಿತು.

ಸಭಾಭವನದ ಉದ್ಘಾಟನೆಯನ್ನು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಸಭಾಭವನ ಉದ್ಘಾಟಿಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉರ್ಬನ್ ಪಿಂಟೋ ಸಂಘದ ಕಛೇರಿ ಉದ್ಘಾಟಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ ಪೈಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ವೆಂಕಟರಮಣ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಮೆಸ್ಕಾಂ ಸುಬ್ರಹ್ಮಣ್ಯ ಉಪ ವಿಭಾಗದ ಎಇಇ ಚಿದಾನಂದ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷರುಗಳಾದ ಬಾಸ್ಕರ ಬಯಂಬು, ಗಣೇಶ್ ಶರ್ಮ, ವಸಂತ ಕೆದಿಲ, ಗಿರೀಶ್ ನೀರ್ಪಾಡಿ, ಚಂದ್ರೋಜಿ ರಾವ್, ಕೇಶವ, ಪ್ರಕಾಶ್ ಭಟ್ ಬೆಳ್ಳಾರೆ , ಪ್ರದೀಪ್ ಪ್ರಭು, ಶ್ರೀಧರ ಕೆ.ಎಸ್. , ದಾಮೋದರ ಮಂಚಿ, ಠಿಶೋರ್ ಕುಮಾರ್, ಮಧುಕಿರಣ್ ಕೆ.ಎನ್., ಹರಿಶ್ಚಂದ್ರ ಕೇಪಳಕಜೆ, ಚಿದಾನಂದ ಮಾಪಳಕಜೆ, ದಯಾನಂದ ಕನ್ನಡ್ಕ, ಸತ್ಯನಾರಾಯಣ ಭಟ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.