ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ , ಸುಳ್ಯದಿಂದ ಹಸಿರುವಾಣಿ ಜೊತೆಗೆ ತೆರಳಿದ ಟ್ಯಾಬ್ಲೋ ನಿರ್ಮಾತೃ ಶಶಿ ಅಡ್ಕಾರ್ ಭೇಟಿ, ಗೌರವ ಸಮರ್ಪಣೆ:
ಮಾ.7 : ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ ಕಾಸರಗೋಡು ಜಿಲ್ಲೆಯ ಕುಂಬ್ಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಕಳಿಯಾಟ ಮಹೋತ್ಸವವು ಮಾ.1 ರಂದು ಆರಂಭಗೊಂಡಿದ್ದು, ಮಾ.7 ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ 2004ರಲ್ಲಿ ಕಳಿಯಾಟ ಮಹೋತ್ಸವವು ನಡೆದಿದ್ದು, ಇದೀಗ 20 ವರ್ಷಗಳ ನಂತರ ಮಾ.1 ರಂದು ಕಳಿಯಾಟ ಮಹೋತ್ಸವ ಆರಂಭಗೊಂಡು ಅದ್ದೂರಿಯಾಗಿ ಇದೀಗ ನಡೆಯುತ್ತಿದೆ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯತೀ ಗಣ್ಯರು ಭೇಟಿ ನೀಡಿ ಪ್ರಸಾದ ಸ್ವೀಕಾರ.
ಶ್ರೀ ಕ್ಷೇತ್ರಕ್ಕೆ ಮಾ.3 ರಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಉಳಿದಂತೆ ಹೊರ ರಾಜ್ಯಗಳಿಂದ, ಸುತ್ತಮುತ್ತಲ ಜಿಲ್ಲೆಗಳಿಂದಲೂ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ.
ಸುಳ್ಯದ ಭಗವತಿ ಅಮ್ಮನ ಟ್ಯಾಬ್ಲೋ ರಚಿಸಿದ ಯುವಕನಿಗೆ ಗೌರವ:
ಸುಳ್ಯದಿಂದ ಹಸಿರುವಾಣಿ ಸಮರ್ಪಣೆ ಸಂದರ್ಭದಲ್ಲಿ ಪೆರ್ಣೆಗೆ ತೆರಳಿದ ಭವ್ಯವಾದ ಟ್ಯಾಬ್ಲೋ ಇದೀಗ ಎಲ್ಲರ ಮನಸೆಳೆಯುತ್ತಿದ್ದು ವ್ಯಾಪಕ ಹರ್ಷಕ್ಕೆ ಕಾರಣವಾಗಿದೆ ಅಲ್ಲದೆ ಇದರ ನಿರ್ಮಾತೃ ಶಶಿ ಅಡ್ಕಾರ್ ರವರು ಮಾ.೫ರಂದು ದೇಗುಲಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದರು ಇದೇ ಸಂದರ್ಭದಲ್ಲಿ ದೇಗುಲ ಸಮಿತಿಯು ಶಶಿ ಅಡ್ಕಾರ್ ರವರನ್ನು ಗೌರವಿಸಲಾಯಿತು.