ಕುಕ್ಕೆ ಸುಬ್ರಹ್ಮಣ್ಯ ನಾಗರಾದನೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಇರೋದು ಸಾಮಾನ್ಯ. ಅಂತೆಯೇ ಇದೀಗ ನಿರಂತರವಾಗಿ ಪುಣ್ಯಕ್ಷೇತ್ರದ ತೀರ್ಥ ಸ್ಥಾನದ ನೀರಿನಲ್ಲಿ ಭಕ್ತಾದಿಗಳು ಬಟ್ಟೆ, ಪ್ಲಾಸ್ಟಿಕ್ ಹಾಗೂ ಕಚ್ಚಾ ವಸ್ತುಗಳನ್ನು ತೀರ್ಥ ಸ್ಥಾನದ ನೀರಿನಲ್ಲಿ ಎಸೆದು ಸ್ಥಾನದ ಕೊಳವೆಯನ್ನು ಮಾಲಿನ್ಯ ಮಾಡತಕ್ಕದ್ದು ಕಂಡು ಬರುತ್ತಿದೆ ಇದರಿಂದ ಮೀನುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇದನ್ನು ಮನಗಂಡ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಕುಮಾರಧಾರ ತೀರ್ಥ ಸ್ಥಾನದ ನೀರಿನಲ್ಲಿದಂತಹ ಬಟ್ಟೆ, ಬಾಟಲಿಗಳು ಹಾಗು ಕಚ್ಚಾ ವಸ್ತುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕೈಗೊಂಡಿರುತ್ತಾರೆ. ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಎಷ್ಟು ಮಾಹಿತಿ ನೀಡಿದರು ಪ್ರಯೋಜನವಾಗುತ್ತಿಲ್ಲ. ಇದನ್ನು ಮನಗಂಡ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ.ರವಿಕಕ್ಕೆ ಪದವು ಅವರ ಮಾರ್ಗದರ್ಶನದಲ್ಲಿ ಇಂದಿನ ಸ್ವಚ್ಛತಾ ಕಾರ್ಯಕ್ರಮದ ನಾಯಕ ರವಿ ಕುಲ್ಕುಂದ ರವರ ನೇತೃತ್ವದಲ್ಲಿ ಸ್ವಚ್ಛತೆಯನ್ನು ಕೈಗೊಂಡಿರುವುದು ಶ್ಲಾಘನೀಯ ಅಲ್ಲದೆ ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ.
- Thursday
- December 5th, 2024