Ad Widget

ಕುಲ್ಕುಂದ : ಇಂದಿನಿಂದ ಮಾ.04 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ 55ನೇ ವರ್ಷದ ಒತ್ತೆಕೋಲ

(ವರದಿ : ಉಲ್ಲಾಸ್ ಕಜ್ಜೋಡಿ)
ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇಂದಿನಿಂದ(ಮಾ.02) ಮಾ.04 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 55ನೇ ವರ್ಷದ ಒತ್ತೆಕೋಲ ಹಾಗೂ ಶ್ರೀ ಕೊರತಿಯಮ್ಮ ದೈವದ 9ನೇ ವರ್ಷದ ನೇಮೋತ್ಸವವು ನಡೆಯುತ್ತಿದ್ದು, ಮಾ.02 ರಂದು ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಸಂಜೆ 7:30 ರಿಂದ ಶ್ರೀ ಕೊರತಿಯಮ್ಮ ದೈವದ ನಡಾವಳಿ ನಡೆಯಲಿದ್ದು, ರಾತ್ರಿ 9:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಮಾ.03 ರಂದು ಸಂಜೆ 5:00 ಗಂಟೆಗೆ ಭಂಡಾರ ಹೊರಡುವುದು, ಸಂಜೆ 7:00 ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ 8:30ಕ್ಕೆ ಅನ್ನಸಂತರ್ಪಣೆ, ರಾತ್ರಿ 11:00 ಗಂಟೆಯಿಂದ ಕುಲ್ಚಾಟ ದೈವದ ನಡಾವಳಿ ನಡೆಯಲಿದೆ. ಹಾಗೂ ಸಂಜೆ 6:30 ರಿಂದ ರಾತ್ರಿ 9:30 ರವರೆಗೆ ಕುಲ್ಕುಂದ ಪರಿಸರದ ಮಕ್ಕಳಿಂದ “ನೃತ್ಯ ವೈವಿಧ್ಯ” ನಡೆಯಲಿದ್ದು, ರಾತ್ರಿ 9:30 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಶ್ರೀ ಉಮೇಶ್ ಆಚಾರ್ಯ ಬಾರ್ಯ ವಿರಚಿತ “ಪರೆಕೆದ ಪಲ್ಲೆಂಕಿ” ತುಳು ಯಕ್ಷಗಾನ ನಡೆಯಲಿದೆ.
ಮಾ.04 ರಂದು ಪ್ರಾತಃಕಾಲ 4:30 ಕ್ಕೆ ಕಳಸಾಟ, ಪ್ರಾತಃಕಾಲ 5:00 ಗಂಟೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 7:00 ಗಂಟೆಗೆ ಮಾರಿಕಳ ಹಾಗೂ ಗಂಧ ಪ್ರಸಾದ ವಿತರಣೆ, ಬೆಳಿಗ್ಗೆ 8:00 ಗಂಟೆಯಿಂದ ಗುಳಿಗ ದೈವದ ನಡಾವಳಿ ನಡೆಯಲಿದೆ.

. . . . . . .

Related Posts

error: Content is protected !!