
ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದ ಘಟನೆ ಮಾ.1ರಂದು ವರದಿಯಾಗಿದೆ.
ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು ಒಬ್ಬಾತನಿಗೆ ಗಂಭೀರ ಗಾಯಾವಾಗಿರುವುದಾಗಿ ತಿಳಿದುಬಂದಿದೆ. ಒಬ್ಬಾತ ಸ್ಥಳೀಯ ಟೀಚರ್ ಒಬ್ಬರ ಮಗ ಎನ್ನಲಾಗಿದೆ. ಒಬ್ಬನ ಕೈಗೆ ಹಾಗೂ ಇನ್ನೊಬ್ಬ ಸವಾರನ ಕಾಲಿಗೆ ಗಾಯವಾಗಿದೆ. ಮಿಥುನ್ ಬಂಟೋಡಿ ಎಂಬ ಯುವಕನ ಕಾಲು ಮುರಿತಗೊಂಡಿರುವುದಾಗಿ ತಿಳಿದುಬಂದಿದೆ. ಅವರ ಪುತ್ರಿಗೂ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗುದೆ.