ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಸುವರ್ಣ ಮಹೋತ್ಸವದ ಪೂರ್ವ ಭಾವಿಯಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಹಾಗೂ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಗುದ್ದಲಿ ಪೂಜೆ ನೆರವೇರಿಸಿ, ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ದಿನಾಂಕ 13 ಸೆಪ್ಟೆಂಬರ್ 2023ರಂದು ಚಾಲನೆಯನ್ನು ನೀಡಿದರು. ಪ್ರತಿಯೊಬ್ಬರಿಗೂ ತಂದೆ ತಾಯಿಯ ಋಣ, ವಿದ್ಯಾ ಬುದ್ಧಿಯನ್ನು ಕಲಿಸಿದ ಗುರುಗಳ ಋಣ ಇರುತ್ತದೆ. ಅದನ್ನು ಅವಕಾಶ ಸಿಕ್ಕಾಗ ತೀರಿಸಿಕೊಂಡು ಕೃತಾರ್ಥರಾಗಬೇಕೆಂದು ಈ ಸಂದರ್ಭದಲ್ಲಿ ನುಡಿದರು.
ಶಾಲೆಯ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪರ್ಧಾ ಸಮಿತಿಯ ಅಧ್ಯಕ್ಷರಾದ ಮಹೇಶ ಮೇರ್ಕಜೆಯವರು ಸ್ವಾಗತಿಸಿದರು, ಆಂಗ್ಲ ಮಾಧ್ಯಮ ಮುಖ್ಯೋಪಾಧ್ಯಾಯಿನಿ ಚೈತ್ರಾ ಅವರು ವಂದಿಸಿದರು.
ಅನಂತರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಶಾಲೆಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ
ಪ್ರಾಥಮಿಕ ವಿಭಾಗದಲ್ಲಿ ಸಾಮೂಹಿಕ ದೇಶಭಕ್ತಿಗೀತೆ ಗಾಯನ ಸ್ಪರ್ಧೆಯಲ್ಲಿ
ಪ್ರಥಮ -ರೋಟರಿ ಆಂಗ್ಲ ಮಾಧ್ಯಮ ಶಾಲೆ ಸುಳ್ಯ, ದ್ವಿತೀಯ -ವಿವೇಕಾನಂದ ಪ್ರಾಥಮಿಕ ಶಾಲೆ ವಿನೋಬನಗರ ಅಡ್ಕಾರ್ ಪಡೆದುಕೊಂಡಿತು.
ಪ್ರಾಥಮಿಕ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ
ಪ್ರಥಮ -ಪೂರ್ವಿಕ್ ಐ ಸಿ
ಸ. ಉ. ಹಿ. ಪ್ರಾ. ಶಾಲೆ ಬಳ್ಪ, ದ್ವಿತೀಯ –
ಸಾತ್ವಿಕ್ ಎಂ ಸ. ಹಿ. ಪ್ರಾ. ಶಾಲೆ ಕುಕ್ಕುಜಡ್ಕ,
ತೃತೀಯ-ಜಶ್ವಿತಾ ಬಿ. ಎಸ್, ಸ ಹಿ. ಪ್ರಾ. ಶಾಲೆ ಶೇಣಿ, ಪ್ರೌಢಶಾಲೆ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ
ಪ್ರಥಮ -ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ,
ದ್ವಿತೀಯ-ಸ.ಪದವಿ ಪೂರ್ವಕಾಲೇಜು(ಪ್ರೌಢಶಾಲಾ ವಿಭಾಗ) ಸುಳ್ಯ,
ತೃತೀಯ -ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ,
ಪ್ರೌಢಶಾಲೆ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ
ಪ್ರಥಮ-ಸ. ಪ್ರೌಢಶಾಲೆ ಮರ್ಕಂಜ, ದ್ವಿತೀಯ- ವಿವೇಕಾನಂದ ಪ್ರೌಢಶಾಲೆ ವಿನೋಬನಗರ ಅಡ್ಕಾರ್ ಪಡೆದುಕೊಂಡರು.
ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿಜೇತ ವಿದ್ಯಾರ್ಥಿಗಳಿಗೆ ನೀಡಲಾಯಿತು. ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ, ಸುವರ್ಣ ಮಹೋತ್ಸವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಮೇರ್ಕಜೆ, ಸಾಂಸ್ಕೃತಿಕ , ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಮಹೇಶ್ ಮೇರ್ಕಜೆ, ಚೊಕ್ಕಾಡಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚೈತ್ರಾ ಯು, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ದಿವ್ಯಾ ಮಡಪ್ಪಾಡಿ, ತೀರ್ಪುಗಾರರಾದ ಅಣ್ಣಪ್ಪ ಸಾಸ್ತಾನ, ಶಶಿಕುಮಾರ್ ಬಿ ಎಸ್, ತಾರಾನಾಥ ಸವಣೂರು ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳು ಹಾಗೂ ಅಧ್ಯಾಪಕ ವೃಂದದವರು ಸಹಕರಿಸಿದರು.
ಸಾಂಸ್ಕೃತಿಕ, ಶೈಕ್ಷಣಿಕ ಸಮಿತಿಯ ಸಂಚಾಲಕಿ ಶ್ರೀಮತಿ ಜಯಶ್ರೀ ಮೇರ್ಕಜೆ ಸ್ವಾಗತಿಸಿದರು. ಚೊಕ್ಕಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ ವಂದಿಸಿದರು.
ಶಿಕ್ಷಕಿ ಶ್ರೀಮತಿ ಸಂಧ್ಯಾಕುಮಾರಿ ಒ ವಿಜೇತರ ಪಟ್ಟಿಯನ್ನು ವಾಚಿಸಿದರು. ಶ್ರೀಮತಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.