ಮೊಬೈಲಿನಿಂದ ದೂರ ಇರಿ, ಸಾಮಾಜಿಕ ಜಾಲತಾಣಗಳ ಬಳಕೆಯ ಸಂದರ್ಭದಲ್ಲಿ ಎಚ್ಚರ ವಹಿಸಿ, ಅಪರಿಚಿತ ವ್ಯಕ್ತಿಗಳ ಸಹವಾಸ ಮಾಡಬೇಡಿ ಎಂದು ಬೆಳ್ಳಾರೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಸವಿತಾ ಮಕ್ಕಳಿಗೆ ಎಚ್ಚರಿಕೆ ಸಂದೇಶ ನೀಡಿದರು. ಇವರು ಸೆಪ್ಟೆಂಬರ್ 12ರಂದು ಬೆಳ್ಳಾರೆ ಜೆಸಿಐ ವತಿಯಿಂದ ಎಣ್ಮೂರು ಪ್ರೌಢಶಾಲೆಯಲ್ಲಿ ನಡೆದ ಪೋಕ್ಸೋ ಮತ್ತು ಸೈಬರ್ ಕ್ರೈಂ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೆಳ್ಳಾರೆ ಜೇಸೀ ಘಟಕಾಧ್ಯಕ್ಷ ಜೇಸಿ ರವೀಂದ್ರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಶ್ರೀಮತಿ ತೇಜಾವತಿ , ಬೆಳ್ಳಾರೆ ಜೇಸಿಯ ಪೂರ್ವಾಧ್ಯಕ್ಷರಾದ ಜೇಸಿ ಪ್ರದೀಪ್ ಕುಮಾರ್ ರೈ, ಜೇಸಿ ಪ್ರೀತಂ ರೈ, ಜೇಸಿ ನಾಗೇಶ್ ಕುಲಾಲ್, ಜೇಸಿ ಜಯರಾಮ ಉಮಿಕ್ಕಳ, ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಲಿಂಗಪ್ಪ ಬೆಳ್ಳಾರೆ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷರಾದ ಜೇಸಿ ಜಗದೀಶ ರೈ ವಂದಿಸಿದರು. ಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ಉಷಾ ಕೆ.ಎಸ್. ಕಾರ್ಯಕ್ರಮ ಸಂಘಟಿಸಿದ್ದರು.
- Thursday
- November 21st, 2024