ಗೆಳೆಯರ ಬಳಗ(ರಿ.) ದೇವ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲ(ರಿ.) ದೇವ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ, ಅಂಗನವಾಡಿ ಬೆಂಬಲ ಸಮಿತಿ ದೇವ-ದೇವಚಳ್ಳ ಇವುಗಳ ಜಂಟಿ ಆಶ್ರಯದಲ್ಲಿ ಸೆ.06 ರಂದು ದ.ಕ.ಜಿ.ಪಂ.ಸ.ಕಿ.ಪ್ರಾ ಶಾಲಾ ವಠಾರ ದೇವ ಇಲ್ಲಿ 33ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಜಾರುಕಂಬ ಸೇರಿದಂತೆ ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು. ದೇವ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್ ರವರು ಉದ್ಘಾಟಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಗೌರವಾಧ್ಯಕ್ಷರಾದ ಯೋಗೀಶ್ ದೇವ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರಾದ ಕಲಾ ಪದ್ಮನಾಭ ದೇವ, ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಲತಾ.ಕೆ.ಎನ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಕಮಲ ಉಪಸ್ಥಿತರಿದ್ದರು.
ಧಾರ್ಮಿಕ ಉಪನ್ಯಾಸದಲ್ಲಿ ಪ್ರಜ್ವಲ್ ಪೊಯ್ಯಮಜಲು ಧಾರ್ಮಿಕ ಉಪನ್ಯಾಸ ನೀಡಿದರು. ಸಾರ್ವಜನಿಕ ಮಕ್ಕಳ ಕೃಷ್ಣ ವೇಶ ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು.
ಪುರುಷರಿಗೆ ಮೊಸರು ಕುಡಿಕೆ, ವಾಲಿಬಾಲ್, ಹಗ್ಗಜಗ್ಗಾಟ, ರಸ್ತೆಓಟ, ಭಕ್ತಿಗೀತೆ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರಿಗೆ ಗುಂಡು ಎಸೆತ, ಮಹಿಳೆಯರಿಗೆ ಜಾರುಕಂಬ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ತ್ರೋಬಾಲ್, ಭಕ್ತಿಗೀತೆ, ಸಂಗೀತ ಕುರ್ಚಿ, ರಸ್ತೆ ಓಟ, ಸಾರ್ವಜನಿಕ ಮಕ್ಕಳಿಗೆ, ಶಾಲಾ ಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಯಿತು.
ಸಂಜೆ ಸಮಾರೋಪ ಸಮಾರಂಭ ನಡೆಯಿತು. ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಲೋಚನಾ ದೇವ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ಅಂಬೆಕಲ್ಲು, ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ.ನಿ ಕಾರ್ಯನಿರ್ವಹಣಾಧಿಕಾರಿ ಚೇತನ್, ಯಶ್ವಿತ್ ಕಾಳಂಮನೆ, ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಗುರುಪ್ರಸಾದ್, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ಪ್ರಗತಿಪರ ಕೃಷಿಕರಾದ ವಸಂತ ಕುಮಾರ್ ಬೊಳ್ಳಾಜೆ, ಬಾಲಕೃಷ್ಣ ಗೌಡ ದೇವ, ಶೀನಪ್ಪ ಪಡ್ಪು, ಮಹಿಳಾ ಮಂಡಳಿ ಅಧ್ಯಕ್ಷರಾದ ಪದ್ಮನಾಭ ದೇವ, ಕಾರ್ಯದರ್ಶಿ ಉಷಾ ಸತೀಶ್ ಕನ್ನಡಕಜೆ, ಗೆಳೆಯರ ಬಳಗದ ಕಾರ್ಯದರ್ಶಿ ಜಯಂತ ದೇವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ಗೌಡ ಮತ್ತು ಒತ್ತುಗೌಡರಾದ ಬಾಲಕೃಷ್ಣ ಗೌಡ ದೇವ(ಊರುಗೌಡ), ಶೀನಪ್ಪ ಗೌಡ ಪಡ್ಪು(ಒತ್ತು ಗೌಡ) ಇವರನ್ನು ಸಮಾಜ ಸೇವೆಯ ನೆಲೆಯಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಪದವಿ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ದೇವ ಕಿರಿಯ ಪ್ರಾಥಮಿಕ ಶಾಲಾ ಹಳೆಯ ವಿದ್ಯಾರ್ಥಿಯನ್ನು ಗುರುತಿಸಿ ಗೌರವಿಸಲಾಯಿತು.
ಯೋಗೀಶ್ ಅವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ತಿಕ್ ಡಿ ಕಾರ್ಯಕ್ರಮ ನಿರೂಪಿಸಿದರು. ಗೋಪಾಲಕೃಷ್ಣ ಕನ್ನಡಕಜೆ ಧನ್ಯವಾದ ಸಮರ್ಪಿಸಿದರು.