

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮೇ.31ರಂದು ಹಮ್ಮಿಕೊಳ್ಳಲಾಯಿತು. ಶಾಲಾ ಸಂಚಾಲಕರಾದ ಶ್ರೀ ಪಿ ಜಿ ಎಸ್ ಎನ್. ಪ್ರಸಾದ್, ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಉಪ ಕಾರ್ಯದರ್ಶಿಯವರಾದ ಭಾರತಿ ಶಂಕರ್ ಆದಾಳ,
ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಲಾ ಮುಖ್ಯ ಗುರು ಕೃಷ್ಣಮೂರ್ತಿ ಸ್ವಾಗತಿಸಿದರು. ಶುಭಾ.ಡಿ ಧನ್ಯವಾದಗೈದರು. ಎಲ್ಲಾ ಮಕ್ಕಳು ಶಾಲೆಯ ಮೂಲ ಸಂಸ್ಥಾಪಕರಾದ ಸ್ವ.ಕೇನ್ಯ ಮಂಜಪ್ಪ ರೈ ಹಾಗೂ ಶಾಲೆಯನ್ನು ಪುನರ್ ಸ್ಥಾಪಿಸಿದ ಕೀರ್ತಿಶೇಷ ನೆಟ್ಟಾರು ವೆಂಕಟ ಸುಬ್ಬರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತರಗತಿ ಪ್ರವೇಶಿಸಿದರು. ಎಲ್ಲಾ ಮಕ್ಕಳಿಗೂ ಸಿಹಿ ತಿಂಡಿ ಹಂಚಿ ಸಂಭ್ರಮದಿಂದ ತರಗತಿಗಳಿಗೆ ಸ್ವಾಗತಿಸಲಾಯಿತು.