- Thursday
- October 31st, 2024
ಜೀವನದಲ್ಲಿ ಪ್ರತಿಯೊಬ್ಬರಿಗೂ ಕೆಲವೊಂದು ನಿರೀಕ್ಷೆಗಳಿರುತ್ತವೆ. ಕೆಲವರಿಗೆ “ನಾನು ಇವತ್ತು ಚೆನ್ನಾಗಿ ಓದಿದ್ರೆ ನಾಳೆ ನಂಗೆ ಒಳ್ಳೆಯ ಕೆಲಸ ಸಿಗುತ್ತೆ” ಅನ್ನೋ ನಿರೀಕ್ಷೆ, ಇನ್ನೂ ಕೆಲವರಿಗೆ “ನಾನು ಜೀವನದಲ್ಲಿ ಏನೋ ಒಂದು ಸಾಧನೆ ಮಾಡೋದಕ್ಕೆ ಹೊರ್ಟಿದ್ದೀನಿ, ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ” ಅನ್ನೋ ನಿರೀಕ್ಷೆ. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಅದ ನಿರೀಕ್ಷೆಗಳಿರುತ್ತವೆ. ನಿರೀಕ್ಷೆ ಅನ್ನೋದಕ್ಕಿಂತ ನಂಬಿಕೆ ಎನ್ನಬಹುದು....
ಗಿಸಾ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಆಯೋಜಿಸಿದ್ದ ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಸನ ಮಾಡುವುದರಲ್ಲಿ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ಪಂಜದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಅನ್ವಿತಾ ಶೆಟ್ಟಿ, ಆತ್ಮಿಕಾ.ಪಿ.ಆರ್, ದರ್ಶಲ್ ಗೌಡ.ಪಿ, ಮೋಕ್ಷಿತಾ ಪಲ್ಲೋಡಿ, ಸಾನ್ವಿ.ಡಿ, ತನ್ವಿ.ಎಂ.ಜಿ ಇವರುಗಳು ಭಾಗವಹಿಸಿರುತ್ತಾರೆ.ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪದಕವನ್ನು ನೀಡಿ...
ಸುಳ್ಯದಲ್ಲಿ ಭಾರಿ ಬಹುಮತದಿಂದ ಗೆಲುವು ತಂದುಕೊಟ್ಟ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯದ ಬಂಟರ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಇನ್ನು ನಾವು ಸುಮ್ಮನೆ ಕುಳಿತುಕೊಳ್ಳದೇ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಶ್ರಮಿಸಬೇಕಾಗಿದೆ ಎಂದರು. ನಮಗಾದ ಹಿನ್ನಡೆಯ ಕುರಿತು ವಿಮರ್ಶೆ ಮಾಡಿಕೊಂಡು ಆತ್ಮಾವಲೋಕನ ಮಾಡುತ್ತೇವೆ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯೋಣ ಎಂದು...
2022-23ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಮುಡಿಪು ಜವಾಹರ್ ನವೋದಯ ವಿದ್ಯಾಲಯ ಇಲ್ಲಿನ ವಿದ್ಯಾರ್ಥಿ ಅಚಲ್ ಬಿಳಿನೆಲೆ 95.2% (500ರಲ್ಲಿ 476) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಕೆವಿಜಿ ಪಾಲಿಟೆಕ್ನಿಕ್ ನ ಶಿಕ್ಷಕರಾದ ಚಂದ್ರಶೇಖರ ಬಿಳಿನೆಲೆ ಹಾಗೂ ಡಾ. ಅನುರಾಧಾ ಕುರುಂಜಿಯವರ ಪುತ್ರ.
ಬೆಳ್ಳಾರೆ: ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಬೆಳ್ಳಾರೆ ಇದರ 2023/24 ನೇ ಶೈಕ್ಷಣಿಕ ವರ್ಷಾರಂಭೋತ್ಸವ ಮಿಹ್ರಜಾನುಲ್ ಬಿದಾಯ ಕಾರ್ಯಕ್ರಮ ಇಂದು ನಡೆಯಿತು. ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹು ಹಸೈನಾರ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ವೇದಿಕೆಯಲ್ಲಿ ಅಧ್ಯಾಪಕರುಗಳಾದ ಬಹು ಝೈನುದ್ದೀನ್ ಮುಸ್ಲಿಯಾರ್, ಬಹು. ಸುಲೈಮಾನ್ ಮುಸ್ಲಿಯಾರ್, ಬಹು.ಶಮೀಮ್ ಹುದವಿ, ಮುಂತಾದವರು...
ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಇದರ ವತಿಯಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ವಾರದ ಯೋಗ ತರಬೇತಿ ಶಿಬಿರ ಉದ್ಘಾಟನೆಗೊಂಡಿತು.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಯೋಧ ಗಂಗಾಧರ ದಂಬೆಕೋಡಿ ಅವರು “ಕಲುಷಿತ ವಾತಾವರಣದಲ್ಲಿ ಅರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ. ಯೋಗದಿಂದ ಆರೋಗ್ಯ ಸಾಧ್ಯ. ಕಿರಣ ಸಂಸ್ಥೆ ಸಮಾಜಮುಖಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿರುವುದು...
ಕೋಲ್ಚಾರು ತರವಾಡು ಕುಟುಂಬದ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಡು ಮಹೋತ್ಸವದ ಹಿನ್ನಲೆ ಭಕ್ತಿ ಸಡಗರದಿಂದ ಹಸಿರುವಾಣಿ ಮೆರವಣಿಗೆ ಸಾಗಿಬಂದಿತು.ಇಂದು ಬೆಳಿಗ್ಗೆ ಗಂಟೆ 8.30 ರಿಂದ ಕೋಲ್ಟಾರು ಐನ್ ಮನೆಯಿಂದ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆಯಲ್ಲಿ ನೂರಾರು ವಾಹನಗಳೊಂದಿಗೆ ಸಾಗಿ ಬಂದು ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ...
ಅನ್ಸಾರ್ ವತಿಯಿಂದ ಹಜ್ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ.ಪವಿತ್ರ ಹಜ್ ಯಾತ್ರಿಕ ಸೃಷ್ಟಿಕರ್ತನ ಅತಿಥಿ ಸರ್ವಾದರಣಿಯರು ಅಶ್ರಫ್ ಕಾಮಿಲ್ ಸಖಾಫಿ ಪ್ರಸಕ್ತ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಸುಳ್ಯ ಮತ್ತು ಆಸುಪಾಸು ತಾಲೂಕುಗಳ ಯಾತ್ರಿಕರಿಗೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಜ್ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ ಅನ್ಸಾರಿಯ ಎಜುಕೇಶನ್ ಸೆಂಟರ್...