ಸುಳ್ಯ: ಪಕ್ಷನಿಷ್ಠೆ, ಶ್ರದ್ಧೆ ಧಾರ್ಮಿಕ ನಂಬಿಕೆ ಹಾಗೂ ಎಲ್ಲರೊಡನೊಂದಾಗಿ ಬೆರೆತು ಬದುಕಿದ ನವೀನ್ ಕುಮಾರ್ ಮೇನಾಲ ಓರ್ವ ಅಜಾತಶತ್ರು. ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ ಎಂದು ಸುಳ್ಯದ ಬಿಜೆಪಿ ಮುಂದಾಳುಗಳು ಹೇಳಿದ್ದಾರೆ. ಮೆ.18ರಂದು ದುರಂತಕ್ಕೀಡಾಗಿ ನಿಧನರಾದ ಬಿಜೆಪಿ ಧುರೀಣ ನವೀನ್ ರೈ ಮೇನಾಲರಿಗೆ ಸೋಮವಾರ ಬಿಜೆಪಿ ಮಂಡಲ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿ ನುಡಿನಮನ ಸಲ್ಲಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದ ಅವರು ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದರು. ಅವರು ಯಾವ ಸ್ಥಾನ ಮಾನಕ್ಕೂ ಅಪೇಕ್ಷೆ ಪಟ್ಟವರಲ್ಲ. ಪಕ್ಷವು ಓರ್ವ ಸಜ್ಜನ ನಾಯಕನನ್ನು ಕಳಕೊಂಡಿದೆ ಎಂದು ಹೇಳಿದರು.ನುಡಿನಮನ ಸಲ್ಲಿಸಿದ ಜಿ.ಜಿ.ನಾಯಕ್ ನವೀನ್ ರೈ ಹಿಂದುಗಳ ಪರವಾಗಿ ಧೈರ್ಯ ವಾಗಿ ನಿಲ್ಲುತ್ತಿದ್ದ ಅವರ ಮಾರ್ಗದರ್ಶನ ಸಂಘಟನೆಗೆ ಅಗತ್ಯವಿತ್ತು ಎಂದರು. ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿ ನವೀನ್ ರೈ ಸಂಘಟನೆ ಹಾಗೂ ಪಕ್ಷಕ್ಕಾಗಿ ನಿರಂತರ ದುಡಿದ ವ್ಯಕ್ತಿ ಎಂದರು.ಹಿರಿಯ ನಾಯಕ ಎಸ್.ಎನ್.ಮನ್ಮಥ ಮಾತನಾಡಿ ಜಿ.ಪಂ. ಚುನಾವಣೆ ಸಂದರ್ಭ ಜಾತಿ ಮತ ಮೀರಿ ಜಯ ಗಳಿದವರು. ಅವರು ಸಾತ್ವಿಕ ಗುಣದಿಂದ ಆದರ್ಶರಾದವರು ಎಂದು ಹೇಳಿದರು.ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಯಶೋದ ರಾಮಚಂದ್ರ ಮಾತನಾಡಿ ನವೀನರ ಕುಟುಂಬಕ್ಕೆ ಕಾರ್ಯಕರ್ತರು ಒಂದಲ್ಲ ಒಂದು ರೀತಿಯಲ್ಲಿ ಆಸರೆಯಾಗಿ ನಿಲ್ಲಬೇಕು ಎಂದರು.ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕಣೆಮರಡ್ಕ ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕಾಯರ್ತೋಡಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್, ಪುತ್ತೂರು ತಾ.ಪಂ. ಮಾಜಿ ಸದಸ್ಯೆ ಪುಲಸ್ತ್ಯ ರೈ, ಎ.ಟಿ. ಕುಸುಮಾಧರ ಮತ್ತಿತರರು ಮಾತನಾಡಿ ನವೀನ್ ರೈ ಅವರ ಗುಣ, ನಡತೆ, ಸೇವೆಯ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು. ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆಯಲ್ಲಿ ದ್ದರು.
- Thursday
- November 21st, 2024