- Saturday
- April 19th, 2025

ಭಾಜಪಾ ಶಾಸಕ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಏ. 20ರಂದು ದಿ.ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಅವರ ತಂದೆ- ತಾಯಿಯ ಆಶೀರ್ವಾದ ಪಡೆದರು. ಈ ಹಿಂದೆ ಪಕ್ಷ ಮತ್ತು ಸರಕಾರ ನಿಮ್ಮ ನೋವಿನ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸ್ಪಂದನೆ ಮಾಡಿತ್ತೊ ಹಾಗೆಯೇ ನಾನು ಕೂಡ ನಿಮ್ಮ ಮನೆಯ ಮಗಳಾಗಿ ನಿಮ್ಮೊಂದಿಗೆ ಇದ್ದು ಎಲ್ಲಾ ರೀತಿಯ...
ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದ ಮೂರನೇ ಆರೋಪಿಗೆ ಮಂಗಳೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.2020 ರ ಅಕ್ಟೋಬರ್ 8 ರಂದು ಕಲ್ಲುಗುಂಡಿಯ ಸಂಪತ್ ಎಂಬವರು ಸುಳ್ಯ ಶಾಂತಿನಗರದ ಅವರ ಬಾಡಿಗೆ ಮನೆಯಿಂದ ಕಾರಿನಲ್ಲಿ ಬರುತ್ತಿದ್ದಾಗ ಅವರನ್ನು ಅಡ್ಡ ಗಟ್ಟಿ, ಅಟ್ಟಾಡಿಸಿಕೊಂಡು ಹೋಗಿ ಮನೆಯೊಂದರೊಳಗೆ ಕಡಿದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ...
ಹರಿಹರ ಪಲ್ಲತ್ತಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಯಿಂದ ಬ್ಯಾಟರಿ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಕಜ್ಜೋಡಿ ಅವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಏ.15 ರಂದು ಶಾಲಾ ಕೊಠಡಿಗೆ ಬೀಗ ಹಾಕಿ ತೆರಳಿದ್ದು, ಏ.18 ರಂದು ಶಾಲೆಗೆ ಬಂದಾಗ ಕಂಪ್ಯೂಟರ್ ಕೊಠಡಿಯ ಬಾಗಿಲಿನ ಬೀಗ ಒಡೆದಿರುವುದು ಗಮನಕ್ಕೆ ಬಂದಿದ್ದು, ಕೊಠಡಿಯ...

ಸುಳ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಏ.19ರಂದು ನಾಮಪತ್ರ ಸಲ್ಲಿಸಿದರು. ರಥಬೀದಿಯಲ್ಲಿ ರುವ ಜೆಡಿಎಸ್ ಚುನಾವಣಾ ಕಚೇರಿ ಮೆರವಣಿಗೆಯಲ್ಲಿ ಸಾಗಿ ಚುನಾವಣಾಧಿಕಾಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ, ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಅಗ್ರಹಾರ ದುಗ್ಗಪ್ಪ, ಜೆಡಿಎಸ್...

ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ರವರು ನಾಮಪತ್ರ ಸಲ್ಲಿಸಿದ ಬಳಿಕ ತಾಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅರಂತೋಡು, ತೊಡಿಕಾನ ಭಾಗದಲ್ಲಿ ಏ.19 ರಂದು ಆ ಭಾಗದ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿ ಮಾಡಿ ಮತಯಾಚಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ, ಕೆಪಿಸಿಸಿ ವಕ್ತಾರರುಗಳಾದ ಟಿ ಎಂ ಶಹೀದ್, ಸುಳ್ಯ ವಿಧಾನಸಭಾ...

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿಕೇರಿ ಎಂಬಲ್ಲಿ ಎ.17 ರಂದು ತ್ಯಾಜ್ಯ ಎಸೆದ ಮೂಡಬಿದ್ರೆ ನಿವಾಸಿಗಳಿಗೆ ರೂ 5500.00 ದಂಡ ವಿಧಿಸಿದ ಘಟನೆ ಎ.19 ರಂದು ನಡೆದಿದೆ. ಎ.17 ರಂದು ನಾಟಿಕೇರಿ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು...

ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರಾವಳಿ ಲೇಖಕಿಯರು- ವಾಚಕಿಯರ ಸಂಘದ 2023ನೇ ಸಾಲಿನ ಸಂಜೀವಿನಿ ಪ್ರಶಸ್ತಿಗೆ ಗುತ್ತಿಗಾರಿನ ಲೀಲಾವತಿ ಪೈಕರವರು ಆಯ್ಕೆಯಾಗಿದ್ದಾರೆ.ಲೀಲಾವತಿ ಪೈಕ ರವರು ಸುಮಾರು 35 ವರ್ಷಗಳಿಂದ ಗುತ್ತಿಗಾರಿನಲ್ಲಿ ಕಮ್ಮಾರಿಕೆ ಕೆಲಸ ಮಾಡುತ್ತಾ ಮೂವರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಿದವರು.ಕುಟುಂಬಕ್ಕೆ ಸಂಜೀವಿನಿಯಾಗುವ ಅಮ್ಮಂದಿರನ್ನು ಈ ಪ್ರಶಸ್ತಿಗೆ ಆಯ್ಕೆ...

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ಸ್ಕೂಲ್ ಆಫ್ ಯೋಗ ಮತ್ತು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ನಡೆಯುವ ಉಚಿತ ಯೋಗ ತರಬೇತಿಯ ಉದ್ಘಾಟನಾ ಸಮಾರಂಭವು ಏಪ್ರಿಲ್‍ನ 17 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ಜರುಗಿತು.ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಿರ್ದೇಶಕ ರಾಮಕೃಷ್ಣ ಭಟ್ ದೀಪ ಬೆಳಗಿಸಿ...
ಜೇನು ತೆಗೆಯಲೆಂದು ಮರ ಹತ್ತಿದ್ದ ಯುವಕನೋರ್ವ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಎ.18 ರಂದು ಸಂಪಾಜೆ ಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕರಿಕೆ ಮೂಲದ ವಿಜಯ್ ಗುರುತಿಸಲಾಗಿದೆ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದ್ದು, ಜೇನು ತೆಗೆಯುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದ ವಿಜಯ್ ಗಂಭೀರ ಗಾಯಗೊಂಡರೆನ್ನಲಾಗಿದೆ. ಕೂಡಲೇ ಜೊತೆಗಿದ್ದವರು ಆತನನ್ನು ಆಸ್ಪತ್ರೆಗೆ...

ಸುಳ್ಯದ ಬಹುಕಾಲದ ಸಮಸ್ಯೆಗಳಲ್ಲೊಂದಾದ ವಿದ್ಯುತ್ 110ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣ, ಕೈಗಾರಿಕಾ ಕ್ಷೇತ್ರದ ಆದ್ಯತೆ ಹಾಗೂ ಇಲ್ಲಿನ ಮೂಲಭೂತ ಸೌಕರ್ಯದ ಜತೆಗೆ ಅಡಿಕೆ ಎಲೆ ಹಳದಿ ರೋಗಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹೇಳಿದರು.ಅವರು ನಾಮಪತ್ರ ಸಲ್ಲಿಕೆಯ ಬಳಿಕ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.ಇಲ್ಲಿ ಅಡಿಕೆ...

All posts loaded
No more posts