Ad Widget

ಜೈಕಿಸಾನ್ ತರಕಾರಿ ಅಂಗಡಿಯ ಪದ್ಮನಾಭ ಹೃದಯಾಘಾತದಿಂದ ನಿಧನ

ಸುಳ್ಯ ಶ್ರೀರಾಂ ಪೇಟೆಯಲ್ಲಿರುವ ಜೈಕಿಸಾನ್ ತರಕಾರಿ ಅಂಗಡಿಯ ಪದ್ಮನಾಭ ರು ಹೃದಯಾಘಾತದಿಂದ ನಿಧನರಾಗಿದ್ದಾರೆ.ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ಅವರು ‌ಬೆಳಗ್ಗೆ ಏಳದಿದ್ದಾಗ ಅವರು ಕರೆದರೆಂದೂ ಈ ವೇಳೆ ಅವರು ಮೃತಪಟ್ಟಿದ್ದರೆಂದು ತಿಳಿದುಬಂದಿದೆ.ಬಳಿಕ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತೆಂದು ತಿಳಿದುಬಂದಿದೆ

ಮೊಗ್ರ: ಕೋಳಿ ಪದಾರ್ಥಕ್ಕೆ ಜಗಳ – ತಂದೆಯಿಂದ ಮಗನ ಕೊಲೆ

ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಎಂಬವರಿಗೂ ಅವರ ಮಗ ಶಿವರಾಮ ಎಂಬವರಿಗೂ ನಿನ್ನೆ ರಾತ್ರಿ 12 ಗಂಟೆಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಯಿತು. ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಆತ ಮಾತನಾಡತೊಡಗಿದಾಗ ತಂದೆ ಶೀನರಿಗೂ ಆತನಿಗೂ ಜಗಳ ಆರಂಭವಾಯಿತು. ಕೋಪಗೊಂಡ ಶೀನ ಬಡಿಗೆಯಿಂದ...
Ad Widget

ಗುತ್ತಿಗಾರು ಸಂತ ಮರಿಯಮ್ಮ ದೇವಾಲಯದಲ್ಲಿ ಪವಿತ್ರ ವಾರದ ಆರಂಭ ಮತ್ತು ಗರಿಗಳ ಹಬ್ಬ

- ಗುತಿಗಾರು ಸಂತ ಮರಿಯಮ್ಮ ದೇವಾಲಯದಲ್ಲಿ ಪವಿತ್ರ ವಾರದ ಆರಂಭ ಮತ್ತು ಗರಿಗಳ ಹಬ್ಬ ಎ.2 ರಂದು ಆಚರಿಸಲಾಯಿತು. ಫಾ. ರೋಯಿ ದಿವ್ಯ ಬಲಿಪೂಜೆಗೆ ನೇತೃತ್ವ ನೀಡಿದರು. ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಈಸ್ಟರ್ ಹಬ್ಬದ ವರಗೆ ನಡಸಲಾಗುವ ಮಾಹಿತಿಯನ್ನು ಚರ್ಚ್ ನ ಧರ್ಮ ಗುರು ಫಾ.ಆದರ್ಶ್ ಜೋಸೆಫ್ ನೀಡಿದರು.

ಬಾಳಿಲ: ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ‘ಚಿಣ್ಣರ ತಕಧಿಮಿ’ ಮಕ್ಕಳ ಬೇಸಗೆ ಶಿಬಿರದ ಅಂಗವಾಗಿ ಏ. 3ರಂದು ಮೆಟ್ರಿಕ್ ಮೇಳ ಜರುಗಿತು. ಮಕ್ಕಳಿಗೆ ವ್ಯವಹಾರ ಪಾಠ ಕಲಿಯುವಿಕೆಯ ದೃಷ್ಟಿಯಿಂದ ಈ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ತಾವು ಮನೆಯಲ್ಲಿ ಬೆಳೆದ ವಿಧವಿಧದ ತರಕಾರಿ, ತಯಾರಿಸಿದ ವಸ್ತುಗಳು, ಹಣ್ಣು ಹಂಪಲುಗಳು, ಔಷಧೀಯ ಗಿಡಗಳು, ಆಹಾರ ಪದಾರ್ಥಗಳು,ತಂಪು ಪಾನೀಯಗಳು...

ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭ

ಶ್ರೀಹರಿಹರೇಶ್ವರ ದೇವಸ್ಥಾನ, ಹರಿಹರಪಲ್ಲತಡ್ಕದಲ್ಲಿ ಇದರ ಸಹಯೋಗಲ್ಲಿ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಇದರ ಆಶ್ರಯದಲ್ಲಿ ‘ನಿಸರ್ಗ ಮಕ್ಕಳ ಬೇಸಿಗೆ ಶಿಬಿರ’ದ ಉದ್ಘಾಟನಾ ಸಮಾರಂಭವು ಎ‌.2 ರಂದು ನಡೆಯಿತು. ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಡೋಲಕ್ ಭಾರಿಸಿ, ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್...

ಸಂಗೀತ ಜ್ಯೂನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಸಂಕೇಸದ ಪೃಥ್ವಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

2023 ನೇ ಸಾಲಿನಲ್ಲಿ ನಡೆದ ಸಂಗೀತ ಜೂನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಪೃಥ್ವಿ ಪಿ ಎಂ ಉಮ್ಮಡ್ಕ ಶೇ.98 ಅಂಕ ಪಡೆದು ಡಿಸ್ಟಿಂಕ್ಷನ್‌ ನಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಸುನಾದ ಸಂಗೀತ ಕಲಾ ಶಾಲೆಯ ಸುಳ್ಯದ ಶಿಕ್ಷಕರಾದ ವಿದ್ವಾನ್‌ ಕಾಂಚನ ಈಶ್ವರ ಭಟ್‌ ಇವರ ಶಿಷ್ಯೆ. ಇವಳು ಸಂಕೇಸದ ಪ್ರಶಾಂತ ಉಮ್ಮಡ್ಕ ಹಾಗೂ ಮಧುರಾ ದಂಪತಿಗಳ ಪುತ್ರಿ. ಸುಬ್ರಹ್ಮಣ್ಯದ...

ಸಂಪಾಜೆ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಗೆ ಗೊನೆ ಮುಹೂರ್ತ

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆ ಎಪ್ರಿಲ್ 11 ಮತ್ತು 12 ರಂದು ನಡೆಯಲಿದ್ದು ಎ.3 ರಂದು ಗೊನೆ ಕಡಿಯುವ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಎಂ.ಬಿ ಸದಾಶಿವ , ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಕುಮಾರ್ ಚಿದ್ಕಾರ್ ,ಆಡಳಿತ ಮಂಡಳಿಯ ಕಾರ್ಯದರ್ಶಿ ಕೇಶವ...

ಏ.4-5: ಪಲ್ಲೋಡಿ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ಕೂಡುಕಟ್ಟಿನ ದೈವಸ್ಥಾನ ಪಲ್ಲೋಡಿ -ಪಂಜ ಇದರ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ ಏ.4ರಿಂದ ಏ.5ತನಕ ನಡೆಯಲಿದೆ. ಏ.4ರಂದು ಬೆಳಿಗ್ಗೆ ಗಂ 9 ರಿಂದ ನಾಗತಂಬಿಲ, ಶ್ರೀ ದೈವಗಳಿಗೆ ಕಲಶ ಶುದ್ಧಿ, ಶ್ರೀ ಸತ್ಯನಾರಾಯಣ ದೇವರ ಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.ಸಂಜೆ ಗಂ.5ರಿಂದ ಭಜನಾ...

ಅರಂತೋಡಿನಲ್ಲಿ ಪ್ರಕೃತಿ ಎಂಟರ್ ಪ್ರೈಸ್ ಶುಭಾರಂಭ

ಆರಂತೋಡಿನ ಗಿರಿಜಾ ಕಾಂಪ್ಲೆಕ್ಸ್ ನಲ್ಲಿ ಪ್ರವೀಣ್ ಬಂಗಾರ್ ಕೋಡಿಯವರ ಮಾಲಕತ್ವದ ಪ್ರಕೃತಿ ಎಂಟರ್ ಪ್ರೈಸ್ ಏ. 3 ರಂದು ಶುಭಾರಂಭಗೊಂಡಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಪ್ರಾಂಶುಪಾಲ ಕೆ. ಆರ್. ಗಂಗಾಧರ್ ನೂತನ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಕಟ್ಟಡ ಮಾಲಕ ಜತ್ತಪ್ಪ ಮಾಸ್ಟರ್ ಅಳಿಕೆ, ಆರಂತೋಡು – ತೊಡಿಕಾನ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸಂತೋಷ್...

ಸುಳ್ಯ ಕೆ.ವಿ.ಜಿ.ಕ್ಯಾಂಪಸ್ ನಲ್ಲಿ ಆಧುನಿಕ ಶೈಲಿಯ ಕ್ಯಾಂಪಸ್ ಕೆಫೆ ಶುಭಾರಂಭ

ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ ಕ್ಯಾಂಪಸ್ ನಲ್ಲಿ ರೂಪೇಶ್ ಪೂಜಾರಿಮನೆ ಯವರ ಮಾಲಕತ್ವದ ಆಧುನಿಕ ಶೈಲಿಯ ಕ್ಯಾಂಪಸ್ ಕೆಫೆ ಎ.3 ರಂದು ಶುಭಾರಂಭ ಗೊಂಡಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಕೆಫೆಯ ಉದ್ಘಾಟನೆ ನೆರವೇರಿಸಿದರು. ಹಿರಿಯರಾದ ಮಾಲಕರ ತಾಯಿ ಶ್ರೀಮತಿ ಕುಸುಮಾ ಪೂಜಾರಿಮನೆ ದೀಪ ಪ್ರಜ್ವಲಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ...
Loading posts...

All posts loaded

No more posts

error: Content is protected !!