Ad Widget

ಅನಿರೀಕ್ಷಿತ ತಿರುವುಗಳ ಅದ್ಭುತ ಪಯಣ ಈ ಬದುಕು…

ಈ ಜೀವನ ಒಂದು ಅದ್ಭುತವಾದ ಪಯಣ. ಈ ಪಯಣದಲ್ಲಿ ನಮಗೆ ಹಲವಾರು ತಿರುವುಗಳು ಸಿಗುತ್ತಾ ಹೋಗುತ್ತವೆ. ಪ್ರತಿಯೊಂದು ತಿರುವುಗಳು ಕೂಡ ನಮಗೆ ಒಂದು ಹೊಸ ಪಾಠ ಮತ್ತು ಹೊಸ ಅನುಭವಗಳನ್ನು ನೀಡುತ್ತಿರುತ್ತವೆ. ಆ ಅನುಭವಗಳು ಸಿಹಿಯಾಗಿಯೂ ಇರಬಹುದು ಅಥವಾ ಕಹಿಯಾಗಿಯೂ ಇರಬಹುದು. ಸಿಹಿಯೇ ಇರಲಿ, ಕಹಿಯೇ ಇರಲಿ ಅದೇನೇ ಇದ್ದರೂ ನಾವು ಎರಡನ್ನೂ ಕೂಡ ಸಮಾನವಾಗಿಯೇ ಸ್ವೀಕರಿಸಬೇಕು. ಏಕೆಂದರೆ ಈ ಬದುಕು ಮುನ್ನಡೆಯಲು ಸಿಹಿಯೂ ಬೇಕು, ಕಹಿಯೂ ಬೇಕು. ಸಿಹಿ ಅನುಭವಗಳು ಒಂದೊಳ್ಳೆಯ ನೆನಪಾಗಿ ಮನಸ್ಸಿನಲ್ಲಿ ಉಳಿದರೆ ಕಹಿ ಅನುಭವಗಳು ಒಂದು ಪಾಠವಾಗಿ ನಾವು ಮುಂದಿನ ಪಯಣದಲ್ಲಿ ಎಚ್ಚರಿಕೆ ವಹಿಸುವಂತೆ ಮಾಡುತ್ತವೆ.
ಬದುಕಿನ ಈ ಪಯಣದಲ್ಲಿ ನಮಗೆ ತುಂಬಾ ಜನರು ಸಿಗುತ್ತಾರೆ. ಅವರಲ್ಲಿ ಕೆಲವರು ಕೊನೆಯವರೆಗೂ ನಮ್ಮ ಜೊತೆಗಿದ್ದರೆ, ಕೆಲವರು ಕಿರುನಗೆ ಬೀರುತ್ತಾ ಮುಂದೆ ಹೋಗುತ್ತಿರುತ್ತಾರೆ. ಆದರೆ ವಿಪರ್ಯಾಸ ಏನೆಂದರೆ ಇನ್ನೂ ಕೆಲವರ ಇರುವಿಕೆ ನಮ್ಮ ಸೋಲು ಗೆಲುವಿನ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ನಾವು ಎಲ್ಲಿಯವರೆಗೆ ಗೆಲ್ಲುತ್ತಿರುತ್ತೇವೆಯೋ ಅಲ್ಲಿಯವರೆಗೆ ನಮ್ಮ ಜೊತೆಗೆ ಬರುತ್ತಾರೆ, ಯಾವಾಗ ನಾವು ಸೋಲುತ್ತೇವೆಯೋ ಆ ಕ್ಷಣವೇ ನಮ್ಮನ್ನು ಬಿಟ್ಟು ಹೊರಟುಹೋಗುತ್ತಾರೆ. ಆದರೆ ಯಾರೂ ಹೇಗೆ ಬೇಕಾದರೂ ಇರಲಿ. ನಮ್ಮನ್ನು ಬಿಟ್ಟು ಹೋಗುವವರು ಹೋಗುತ್ತಲಿರಲಿ. ನಾವು ಮಾತ್ರ ನಮ್ಮನ್ನು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುವವರೊಂದಿಗೆ “ಈ ಮೂರು ದಿನದ ಬದುಕಿನಲ್ಲಿ ಪ್ರೀತಿ ಹಂಚುತ ಕಷ್ಟ ಮರೆಯುತ, ಕನಸು ಕಾಣುತ ಬದುಕು ನಡೆಸುತ, ನೋವು ನುಂಗಿ ನಗುತ ಸಾಗೋಣ ನಮ್ಮ ಸರದಿ ಬರುವವರೆಗೆ, ಈ ಭೂಮಿಯಲ್ಲಿ ನಮ್ಮ ಬದುಕಿನ ಯಾತ್ರೆ ಕೊನೆಯಾಗುವವರೆಗೆ…”
ಒಟ್ಟಿನಲ್ಲಿ ಹೇಳುವುದಾದರೆ ಈ ಬದುಕು “ಕಹಿ-ಸಿಹಿ ಅನುಭವಗಳ, ಅನಿರೀಕ್ಷಿತ ತಿರುವುಗಳ ಒಂದು ಅದ್ಭುತ ಹಾಗೂ ಕುತೂಹಲಕಾರಿ ಪಯಣ…”
✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading