Ad Widget

ಮರ್ಕಂಜ : 53ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ

ಮರ್ಕಂಜ ಫ್ರೆಂಡ್ಸ್ ‌ಇದರ ಆಶ್ರಯದಲ್ಲಿ ಡಿ.19 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರ್ಕಂಜದಲ್ಲಿ 53 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟವು ನಡೆಯಲಿದೆ ಎಂದು ಪ್ರಾಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಿಕೆಯ ಜತೆಗೆ ಒಳ್ಳೆಯ ವ್ಯಕ್ತಿತ್ವ ವಿಕಸನ ಸಾಧ್ಯ – ವೆಂಕಟ್ ದಂಬೆಕೋಡಿ ; ವಳಲಂಬೆಯಲ್ಲಿ ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ

ಕಲಿಕೆಯ ಜತೆಗೆ ಒಳ್ಳೆಯ ವ್ಯಕ್ತಿತ್ವ ವಿಕಸನಗೊಳ್ಳಲು ಎನ್ನೆಸ್ಸೆಸ್ ಶಿಬಿರ ಸಹಕಾರಿ ಎಂದು ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದರು. ಅವರು ಇಂದು ವಳಲಂಬೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಕೆ.ವಿ.ಜಿ.ಪಾಲಿಟೆಕ್ನಿಕ್ ಸುಳ್ಯ ಇದರ ಸಹಯೋಗದೊಂದಿಗೆ ನಡೆದ ದಕ್ಷಿಣ ಕರ್ನಾಟಕ ವಿಭಾಗೀಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಇಲ್ಲಿನ ಒಳ್ಳೆಯ ಅಂಶಗಳನ್ನು...
Ad Widget

ಫೆ-18 : ಭಕ್ತಿಗೀತೆ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡಲು ಗಾಯಕರಿಗೆ ಅವಕಾಶ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ದಿನಾಂಕ 18-2-2023 ರಂದು ಶನಿವಾರ ಮಹಾ ಶಿವರಾತ್ರಿಯ ದಿನ ಶಿವರಾತ್ರಿ ಗಾನವೈಭವ ಕಾರ್ಯಕ್ರಮವು ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಭಕ್ತಿಗೀತೆ ಗಾನ ವೈಭವ ನಡೆಯಲಿದೆ . ಭಕ್ತಿಯ ಹಾಡು ಹಾಡಲು ಆಸಕ್ತ ಇರುವ ಹಿರಿಯ ಮತ್ತು ಕಿರಿಯ...

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಮಹಾಶಿವರಾತ್ರಿ ಉತ್ಸವ

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಇಂದು ಸಂಜೆ ಗಂಟೆ 5-00ರಿಂದ ಶತರುದ್ರಾಭಿಷೇಕ, ರಾತ್ರಿ 9-30ಕ್ಕೆ ಮಹಾಪೂಜೆ ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸಂಜೆ ಗಂಟೆ 6-30ರಿಂದ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್, ಸುರತ್ಕಲ್ ಇವರಿಂದ ಗಿರಿಜಾ ಕಲ್ಯಾಣ-ಕುಮಾರವಿಜಯ ತಾಳಮದ್ದಳೆ ನಡೆಯಲಿದೆ. ರಾತ್ರಿ ಗಂಟೆ 10-00ರಿಂದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ,...

ಕರ್ನಾಟಕ ಭಾವೈಕ್ಯತಾ ಪರಿಷತ್ ನ ಅಧ್ಯಕ್ಷರಾಗಿ ಕೆ.ಎಂ.ಇಖ್ಬಾಲ್ ಬಾಳಿಲ ಆಯ್ಕೆ

ಪುತ್ತೂರು. ಕರ್ನಾಟಕ ಭಾವೈಕ್ಯತಾ ಪರಿಷತ್ ನೂತನ ಅಧ್ಯಕ್ಷರಾಗಿ ಖ್ಯಾತ ವಾಗ್ಮಿ ಕೆ.ಎಂ.ಇಖ್ಬಾಲ್ ಬಾಳಿಲ‌ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಎ.ಅಬೂಬಕರ್ ಅನಿಲಕಟ್ಟೆ,ವಿಟ್ಲ ನವೀನ್ ಪಿರೇರ ಸುರತ್ಕಲ್,ಸಂಚಾಲಕರಾಗಿ ಕೆ.ಎ.ಅಬ್ದುಲ್ ಅಝೀಝ್ ಪುಣಚ,ಕೋಶಾಧಿಕಾರಿಯಾಗಿ ಇಖ್ಬಾಲ್ ಕೋಲ್ಪೆ, ಸಹಕಾರ್ಯದರ್ಶಿಗಳಾಗಿ ಸಮ್ಯಕ್ತ್ ಜೈನ್ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ವೇದಿಕ್ ಕಡಬ,ಸಂಘಟನಾ ಸಹ ಕಾರ್ಯದರ್ಶಿಯಾಗಿ...

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಇಂದು ಮಹಾಶಿವರಾತ್ರಿ ಉತ್ಸವ, ಯಕ್ಷಗಾನ ಬಯಲಾಟ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಇಂದು ಮಹಾಶಿವರಾತ್ರಿ ಉತ್ಸವ ಜರುಗಲಿದ್ದು, ಸಂಜೆ ಗಂಟೆ 6.00ರಿಂದ ಶತರುದ್ರಾಭಿಷೇಕ, ರಂಗಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 7.00ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ "ಶಿವಪಂಚಾಕ್ಷರಿ ಮಹಿಮೆ" ಯಕ್ಷಗಾನ ಬಯಲಾಟ ನಡೆಯಲಿದೆ.

ಭಕ್ತಿ-ಸಡಗರದ ಬೆಳ್ಳಾರೆ ಅಜಪಿಲ ಜಾತ್ರೋತ್ಸವ ಸಂಪನ್ನ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13ರಂದು ಮೊದಲ್ಗೊಂಡು ಫೆ.17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವೋಪೇತವಾಗಿ ಜರುಗಿತು. ಜಾತ್ರೋತ್ಸವದ ಪ್ರಯುಕ್ತ ಫೆ.13ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಂಜೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ನಡೆಯಿತು. ರಾತ್ರಿ ಧ್ವಜಾರೋಹಣದ ಮೂಲಕ ವಿದ್ಯುಕ್ತವಾಗಿ...

ಸಂಪಾಜೆ : ಶ್ರೀ. ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಬ್ಯಾಗ್ ವಿತರಣೆ

ಸಂಪಾಜೆ : ಶ್ರೀ. ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಬ್ಯಾಗ್ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್( ರಿ ) ಸಂಪಾಜೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನಿಕಟಪೂರ್ವ ಪದಾಧಿಕಾರಿಗಳಿಗೆ ಧರ್ಮಸ್ಥಳದಿಂದ ಉಡುಗೊರೆಯಾಗಿ ಬಂದ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ರತ್ನಾವತಿ ಅಳಿಕೆ ವಹಿಸಿದರು....

ನಡುಗಲ್ಲು ಕೊಲ್ಲಮೊಗ್ರ ರಸ್ತೆಗೆ ಮರುಡಾಮರೀಕರಣ – ಪರ್ಯಾಯ ರಸ್ತೆ ಬಳಸಲು ಸೂಚನೆ

ನಡುಗಲ್ಲು ಕೊಲ್ಲಮೊಗ್ರ ರಸ್ತೆಗೆ ಮರುಡಾಮರೀಕರಣ - ಪರ್ಯಾಯ ರಸ್ತೆ ಬಳಸಲು ಸೂಚನೆ ನಡುಗಲ್ಲು ಕೊಲ್ಲಮೊಗ್ರ ರಸ್ತೆಗೆ ಮರುಡಾಮರೀಕರಣ ಕಾಮಾಗಾರಿ ಆರಂಭವಾಗಿದ್ದು, ವಾಹನ ಸವಾರ ಬದಲಿ ರಸ್ತೆ ಬಳಸಲು ಸೂಚಿಸಲಾಗಿದೆ. ಕಾಮಗಾರಿ ನಡೆಯುತ್ತಿರುವ ಕೆಲವು ಕಡೆ ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ಬದಲಿ ರಸ್ತೆಯಾಗಿ ಮಲಯಾಳ-ಐನೆಕಿದು ರಸ್ತೆಯನ್ನು...

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಗೊನೆ ಮುಹೂರ್ತ

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಗೊನೆ ಮುಹೂರ್ತ ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.22 ರವರೆಗೆ ಜಾತ್ರೋತ್ಸವ ನಡೆಯಲಿದ್ದು, ಫೆ.14 ರಂದು ಗೊನೆ ಮುಹೂರ್ತ ನಡೆಯಿತು. ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ...
Loading posts...

All posts loaded

No more posts

error: Content is protected !!