Ad Widget

ಸುಳ್ಯದಲ್ಲಿ ಫೆ.21 ರಂದು ವಿದ್ಯುತ್ ವ್ಯತ್ಯಯ

ಫೆ.21 ಮಂಗಳವಾರ ದಂದು ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಪೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಕೇರ್ಪಳ, ಶ್ರೀರಾಂಪೇಟೆ, ಜಬಳೆ, ಡಿಪೋ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಅರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರ...

ಹರಿಹರ ಪಲ್ಲತ್ತಡ್ಕ : ಜಾತ್ರೋತ್ಸವ ಆರಂಭ ; ಹಸಿರುವಾಣಿ ಸಮರ್ಪಣೆ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ಫೆ.20 ರಂದು ಹಸಿರುವಾಣಿ ಸಮರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು, ಅಭಿವೃದ್ಧಿ ಸಮಿತಿಯವರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
Ad Widget

ಚುನಾವಣೆಗೆ ಸಿದ್ಧರಾಗಿ….ಡಾ ಚೂಂತಾರು.ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ

ಮುಂದಿನ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿರುವುದರಿಂದ ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಬೆಳ್ಳಾರೆ ಗೃಹರಕ್ಷಕದಳಕ್ಕೆ ಫೆ. 19 ರಂದು ಭೇಟಿ ನೀಡಿದರು. ನಿಷ್ಕ್ರಿಯ ಗೃಹರಕ್ಷಕರನ್ನು ತೆಗೆದುಹಾಕಿ ಹೆಚ್ಚು ಕ್ರೀಯಾಶೀಲ ಗೃಹರಕ್ಷಕರನ್ನು...

ಯುವಜನರು ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್.ಎಸ್.ಎಸ್. ಸಹಕಾರಿ – ವೆಂಕಟ್ ದಂಬೆಕೋಡಿ

ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣ, ಸೇವಾ ಮನೊಭಾವ ರೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಗುತ್ತಿಗಾರು ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದರು. ಅವರು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು .ರಾಷ್ಟ್ರೀಯ ಸೇವಾ...

ಗಡಿನಾಡ ದ್ವನಿ ” ಮಧು ಭೂಷಣ” ರಾಜ್ಯ ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ

ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ) ಇದರ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆ ಅವರನ್ನು ಮಧುಭೂಷಣ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.ಪ್ರಶಸ್ತಿ ಪ್ರಧಾನ ಮಹಾ ಸಮ್ಮೇಳನವು ಗಡಿನಾಡ ಪ್ರದೇಶವಾದ ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ 2023 (25) ಫೆಬ್ರವರಿ ರಂದು ನಡೆಯಲಿದೆ. ಸದ್ರಿ ಮಹಾ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಮಧು...

ಫೆ.21: ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ನೇತೃತ್ವದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ನೇತೃತ್ವದಲ್ಲಿ ಕೆ.ವಿ.ಜಿ. ಡೆಂಟಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ, ದ.ಕ. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇವರ ಸಹಯೋಗದಲ್ಲಿ ಫೆ.21ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇದರ ವಠಾರದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ. ಶಿಬಿರವು ಪೂರ್ವಾಹ್ನ ಗಂಟೆ 9-00ರಿಂದ...

ಕೊಯನಾಡು : ಸ್ವಲಾತ್ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಪ್ರಚಾರ ಪತ್ರ ಬಿಡುಗಡೆ

ಕೊಯನಾಡು : ಸ್ವಲಾತ್ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಪ್ರಚಾರ ಪತ್ರ ಬಿಡುಗಡೆ ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಇದರ 25ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ದ್ವಿದಿನ ಧಾರ್ಮಿಕ ಉಪನ್ಯಾಸದ ಪ್ರಚಾರ ಪತ್ರವನ್ನು ಮಸೀದಿ ಅದ್ಯಕ್ಷ ಅಬ್ದುಲ್ ರಝಾಕ್ ಎಸ್ ಎ ಹಾಗೂ ಎನ್ ಐ ಎ...

ದೇವರಗದ್ದೆ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ.ಅಜ್ಜನ ನೇಮಕ್ಕೆ ಹರಿದು ಬಂದ ಭಕ್ತ ಸಾಗರ:

ದೇವರಗದ್ದೆ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ. ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ...

ರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಹವೀಕ್ಷಾಳಿಗೆ ಪ್ರಶಸ್ತಿ

ರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಹವೀಕ್ಷಾಳಿಗೆ ಪ್ರಶಸ್ತಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಇದರ ವಿದ್ಯಾರ್ಥಿನಿ ಹವೀಕ್ಷಾ ಯಸ್. ಆರ್. ಅವರು ಪೈವ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಪಂಜಾಬ್ ಇವರು ಆನ್ಲೈನ್ ಮುಖಾ0ತರ ನಡೆಸಿದ ರಾಷ್ಟ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್...

ನಾಯಿ ಕಾಣೆಯಾಗಿದೆ

ಒಂದೂವರೆ ವರ್ಷದ ಪಮೋರಿಯನ್ ಹೆಣ್ಣು ನಾಯಿ ನೆಲ್ಲೂರು ಕೇಮ್ರಾಜೆಯ ಕೋಡಿಮಜಲು ಎಂಬಲ್ಲಿಂದ‌ ಕಾಣೆಯಾಗಿದೆ. ನೋಡಿದವರು 9449920971 ಈ ನಂಬರ್ ಗೆ ಮಾಹಿತಿ ನೀಡಿ.
Loading posts...

All posts loaded

No more posts

error: Content is protected !!