- Sunday
- April 6th, 2025

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಂಭ್ರಮದಿಂದ ನಡೆಯುತ್ತಿದ್ದು ಫೆ.9 ರಂದು ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ,ವಸಂತ ಕಟ್ಟೆಪೂಜೆ ನಡೆಯಿತು. ಇಂದು ಬೆಳಿಗ್ಗೆ ಕೊಯಿಲ ಉಳ್ಳಾಕುಲು ದೈವಗಳ ಭಂಡಾರ ಬರುವುದು, ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ,ಬಟ್ಟಲು ಕಾಣಿಕೆ,ಶುದ್ಧಿಕಲಶ, ನಡೆಯಲಿದೆ.ಮಧ್ಯಾಹ್ನ ಮಹಾಪೂಜೆ,ವೈದಿಕ...

ಗುತ್ತಿಗಾರು :- ಅಮರ ಸಂಜೀವಿನಿ ಒಕ್ಕೂಟದ ಸಭೆ ಹಾಗೂ ಮಾಹಿತಿ ಕಾರ್ಯಗಾರ ಜ.06 ರಂದು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ವತಿಯಿಂದ ಸಂಜೀವಿನಿ ಸದಸ್ಯೆಯರಿಗೆ ಸ್ವ ಉದ್ಯಮ ಹಾಗೂ ಉದ್ಯಮ ನಡೆಸಲು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಸಹಾಯಧನ ಹಾಗೂ ಕೃಷಿ ಪೌಷ್ಟಿಕ ತೋಟ-ಎಫ್.ಎಸ್.ಎಸ್.ಐ ನೋಂದಣಿ ಬಗ್ಗೆ ಮಾಹಿತಿ...

ಗಡಿಕಲ್ಲು : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು 16 ರಂದು ಒತ್ತೆಕೋಲ ನಡೆಯಲಿದ್ದು, ಫೆ.08 ರಂದು ಗೊನೆ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ಗಡಿಕಲ್ಲು : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಮತ್ತು 16 ರಂದು ಒತ್ತೆಕೋಲ ನಡೆಯಲಿದ್ದು, ಫೆ.08 ರಂದು ಗೊನೆ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ಸುಳ್ಯ ತಾಲೂಕು ಕಸಬಾ ಗ್ರಾಮದ ಕುದ್ಪಾಜೆ ಮನೆ ಕೇಶವ ಕುದ್ಪಾಜೆಯವರ ಪುತ್ರಿ ಚಂದನಾರವರ ವಿವಾಹವು ಕಡಬ ತಾಲೂಕು ಏನೆಕಲ್ಲು ಗ್ರಾಮದ ಪರಮಲೆ ನಾಗರಾಜರವರ ಪುತ್ರ ಸಂಜಯ್ ರೊಂದಿಗೆ ಸುಳ್ಯದ ಓಡಬಾಯಿಯಲ್ಲಿರುವ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ಫೆ.9 ರಂದು ನಡೆಯಿತು.

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ.13 ರಿಂದ ಫೆ.17 ರವರೆಗೆ ನಡೆಯಲಿದ್ದು, ಇಂದು (ಫೆ.09 ರಂದು) ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ ಪೂಜಾ ಕಾರ್ಯ ನೆರವೇರಿಸಿದರು. ಸಹಾಯಕ ಅರ್ಚಕ ಹೆಚ್.ವೆಂಕಟ್ರಮಣ ಭಟ್ ಸಹಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಸುರೇಶ್ ಕುಮಾರ್...

ಆಲೆಟ್ಟಿ ಶ್ರೀ ಸದಾಶಿವ ಕ್ಷೇತ್ರದ ಗುಂಡ್ಯ ಮಾಡಾರಮನೆ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳಧರ್ಮ ನಡಾವಳಿ ನೇಮೋತ್ಸವವು ಪೆ.,2ರಿಂದ 4 ರ ತನಕ ವೇ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.ಫೆ. 2ರಂದು ಸಂಜೆ ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಆಲೆಟ್ಟಿ ಶ್ರೀ...

ದೇವಚಳ್ಳ ಗ್ರಾಮದ ಅಡ್ಡನಪಾರೆ ಪುಳಿಕುಕ್ಕು ನಾಗಪ್ಪ ಗೌಡ ಫೆ.9 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮೀನಾಕ್ಷಿ, ಪುತ್ರ ಲಕ್ಷ್ಮೀಶ ಅಡ್ಡನಪಾರೆ, ಪುತ್ರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಭುವನೇಶ್ವರಿ, ಶ್ರೀಮತಿ ಯಮುನಾ, ಶ್ರೀಮತಿ ಪವಿತ್ರ, ಶ್ರೀಮತಿ ರೂಪ, ಸೊಸೆ, ಅಳಿಯಂದಿರು, ಸಹೋದರರಾದ ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ, ಜನಾರ್ಧನ ಗೌಡ,...

ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿರುವ ನಗರ ಪಂಚಾಯತ್ ವಾಣಿಜ್ಯ ಸಂಕೀರ್ಣ ದಲ್ಲಿ ಜಯಶ್ರೀ ಫೂಟ್ ವೇರ್ ಶುಭಾರಂಭಗೊಂಡಿದೆ. ಇಲ್ಲಿ ವಿಕೆಸಿ ಹಾಗೂ ಇತರ ನವನವೀನ ಮಾದರಿಯ ಉತ್ಕೃಷ್ಟ ಗುಣಮಟ್ಟದ ಪ್ರಸಿದ್ಧ ಕಂಪೆನಿಯ ಪುರುಷರ, ಮಹಿಳೆಯರ ಮಕ್ಕಳ ಪಾದರಕ್ಷೆಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಹಾಗೂ ಕರ್ನಾಟಕ ಇಂಡಸ್ಟ್ರೀಯಲ್ ಸ್ಟಾಫ್ ಯೂನಿಯನ್ ನ ಜಂಟಿ ಸಂಘಟನೆಯಾದ ಭಾರತೀಯ ಮಜ್ದೂರು ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ ಕಾರ್ಮಿಕ ಸಮುದಾಯ ಭವನ "ತಿಲಕ ಭವನ" ಫೆ.೧೧ರಂದು ಉದ್ಘಾಟನೆಗೊಳ್ಳಲಿದೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾದ ಎಸ್. ಅಂಗಾರರವರು ಉದ್ಘಾಟನೆಯನ್ನು ಮಾಡಲಿದ್ದಾರೆ, ಭಾರತೀಯ ಮಜ್ದೂರ್...

All posts loaded
No more posts