ಸುಬ್ರಹ್ಮಣ್ಯ ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್ಗೆ ಬೀದಿ ನಾಯಿಯೊಂದು ಢಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿದ್ದು, ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದ ಸಂದರ್ಭ ಕಾರ್ ಬಂಪರ್ನೊಳಗೆ ಅದೇ ನಾಯಿ ಪತ್ತೆಯಾಗಿರುವ ಸಂಗತಿ ನಡೆದಿತ್ತು. ಆದರೆ ಆ ಬೀದಿ ನಾಯಿ ಅದಾಗಲೇ ತನ್ನ ಮರಿಗಳನ್ನು ಬಿಟ್ಟು ಸುಮಾರು 70 ಕಿಲೋ ಮೀಟರ್ ಸಂಚಾರಿಸಿತ್ತು. ಈಗಿನ ಕಾಲದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ನಾಯಿಗಳ ಜೊತೆ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಪ್ರಚಾರ ಪಡೆಯುವ ಈ ಕಾಲದಲ್ಲಿ ಬಳ್ಪದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿರುವ ಸಂತೋಷ್ ರೈ ಎಂಬವರು ತನ್ನ ಮಗಳಿಗೆ ಮತ್ತು ಆ ಕಳೆದುಹೋದ ನಾಯಿಗೆ ಇರುವ ಅವಿನಾಭಾವ ಸಂಬಂಧವನ್ನು ಅರಿತು ಮತ್ತು ನಾಯಿ ಮರಿಗಳು ಅನಾಥವಾಗಬಾರದು ಮತ್ತು ತನ್ನ ಮಗಳ ಮನಸ್ಸಿಗೆ ಬೇಸರವಾಗಬಾರದು ಎಂದು ತನ್ನ ಸ್ವಂತ ಖರ್ಚಿನಲ್ಲಿ ಪುತ್ತೂರಿಗೆ ತೆರಳಿ ಆ ನಾಯಿಯನ್ನು ಹುಡುಕಿ ಮತ್ತೆ ಬಳ್ಪಕ್ಕೆ ಸೇರಿಸುವಲ್ಲಿ ಸಫಲರಾಗಿದ್ದಾರೆ. ಇವರ ಈ ಮಾನವೀಯ ಮೌಲ್ಯಯುತ ಕಾರ್ಯಕ್ಕೆ ಸ್ಥಳೀಯರು ಹಾಗೂ ಹಿತೈಷಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Thursday
- January 30th, 2025