ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಣಿ ಗರಡಿ ರಸ್ತೆಗೆ ಹಲವು ವರ್ಷಗಳಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಪ್ರತಿನಿಧಿಗಳ ಪ್ರಯತ್ನದಿಂದ ಗ್ರಾಮ ಪಂಚಾಯತ್ ವತಿಯಿಂದ 2022-23ನೇ ಸಾಲಿನ ಸಾರ್ವಜನಿಕ ಕಾಮಗಾರಿಯಲ್ಲಿ ಪ್ರಥಮವಾಗಿ ಸೋಲಾರ್ ದಾರಿ ದೀಪ ಅಳವಡಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ, ಸದಸ್ಯರುಗಳಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಸೀತಾ ಹೆಚ್, ಸ್ಥಳೀಯರಾದ ಹೊನ್ನಪ್ಪ ಪೂಜಾರಿ ಕುಬಲಾಡಿ, ಸಚಿನ್ ಕುಳ್ಳಾಜೆ, ದಿನೇಶ್ ಕುಳ್ಳಾಜೆ, ಪಂಚಾಯಿತಿ ಸಿಬ್ಬಂದಿ ಹರೀಶ್ ಸಿಡ್ಲುಕಜೆ ಮತ್ತಿತರರು ಉಪಸ್ಥಿತರಿದ್ದರು.
- Tuesday
- December 3rd, 2024